ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಕಾರೊಂದು ರಸ್ತೆ ಬದಿಯ ಅಂಗಡಿಗೆ ಗುದ್ದಿದ ಘಟನೆ ಕಾಪು ಮಲ್ಲಾರು ಸ್ವಾಗತ ನಗರ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ.

ಕುಂದಾಪುರ ಮೂಲದ ವ್ಯಕ್ತಿಯೊಬ್ಬರು ಟಯೋಟಾ ಗ್ಲಾಝಾ ಹೊಸ ಕಾರಿನಲ್ಲಿ ಶಿರ್ವಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ಮಲ್ಲಾರು ಸ್ವಾಗತ್ ನಗರ ಬಳಿ ನಿಯಂತ್ರಣ ತಪ್ಪಿ ಅಂಗಡಿಗೆ ಗುದ್ದಿದೆ.
ಢಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಅಂಗಡಿಯ ಒಂದು ಭಾಗದ ಗೋಡೆ ನೆಲಕ್ಕುರುಳಿದೆ. ಅಂಗಡಿಯಲ್ಲಿದ್ದ ಮಾಲೀಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಕಾಪು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Comments are closed.