ಕರ್ನಾಟಕ

ಬಸವನಗುಡಿ ಠಾಣೆಗೆ ಹಾಜರಾದ ಹಂಸಲೇಖ: ಹಂಸಲೇಖ ಪರ ನಟ ಚೇತನ್ ಎಂಟ್ರಿ; ಪರ-ವಿರೋಧ ಪ್ರತಿಭಟನೆ

Pinterest LinkedIn Tumblr

ಬೆಂಗಳೂರು: ಪೇಜಾವರ ಶ್ರೀಗಳ ಕುರಿತಾಗಿ ನಾದಬ್ರಹ್ಮ ಹಂಸಲೇಖ ನೀಡಿದ್ದ ಹೇಳಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ಅವರಿಗೆ ನೋಟೀಸ್ ನೀಡಲಾಗಿದ್ದು ಇಂದು (ನ.25) ಅವರು ಬಸವನಗುಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.

ಈ  ವೇಳೆ ಹಂಸಲೇಖ ಅವರೊಂದಿಗಿರುವುದಾಗಿ ಹೇಳಿಕೆ ನೀಡಿದ್ದ ನಟ ಚೇತನ್ ಅಹಿಂಸಾ ಓಡೋಡಿ ಬಂದಿದ್ದು ಹಂಸಲೇಖ ಪರ ವಿರೋಧ ಈ ವೇಳೆ ಪ್ರತಿಭಟನೆ ನಡೆದಿದೆ. ಬಸವನಗುಡಿ ಪೊಲೀಸ್ ಠಾಣೆಯ ಮುಂದೆ ಸೇರಿದ್ದ ಗುಂಪನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.

ಠಾಣೆಯ ಮುಂದೆ ಹಂಸಲೇಖ ಪರ- ವಿರೋಧ ಪ್ರತಿಭಟನೆ ನಡೆದಿದೆ. ಹಂಸಲೇಖ ಪರ ನಟ ಚೇತನ್ ಪ್ರತಿಭಟನೆ ಮುಂದಾಳತ್ವ ವಹಿಸಿದ್ದರು. ಎರಡೂ ಗುಂಪುಗಳನ್ನು ಚದುರಿಸಲು ಪೊಲೀಸರು ಹರಸಾಹಸಪಟ್ಟರು. ಭಜರಂಗದಳವು ನಟ ಚೇತನ್ ಮಧ್ಯಪ್ರವೇಶಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನಟ ಚೇತನ್ ಕನ್ನಡಪರ ಸಂಘಟನೆಗಳ ಸರ್ಪಗಾವಲಿನಲ್ಲಿ ಠಾಣೆಗೆ ಆಗಮಿಸಿದ್ದಾರೆ.

ಇನ್ನು ಹೇಳಿಕೆ ವಿರುದ್ಧ ಪ್ರಕರಣ ದಾಖಲಾಗಿದ್ದ ಹಿನ್ನಲೆಯಲ್ಲಿ ಹಂಸಲೇಖ ಅವರು ಬಸವನಗುಡಿ ಠಾಣೆಗೆ ಹಾಜರಾಗಿದ್ದರು. ಸುಮಾರು 1 ಗಂಟೆಗಳ ಕಾಲ ಠಾಣೆಯಲ್ಲಿದ್ದರು. ಕಾನೂನಿಗೆ ಗೌರವ ಕೊಟ್ಟು ವಿಚಾರಣೆಗೆ ಹಾಜರಾಗಿದ್ದೇವೆ ಎಂದು ಹಂಸಲೇಖ ಪರ ವಕೀಲ ಸಿ.ಎಸ್.ದ್ವಾರಕಾನಾಥ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

Comments are closed.