ಕರಾವಳಿ

ಕುಖ್ಯಾತ ರೌಡಿಶೀಟರ್ ಕಾಲಿಯಾ ರಫೀಕ್ ಹತ್ಯೆ ಆರೋಪಿ ಝಿಯಾನನ್ನು ಬಂಧಿಸಿದ ಕೇರಳ ಎಟಿಎಸ್

Pinterest LinkedIn Tumblr

ಮಂಗಳೂರು: 2017ರಲ್ಲಿ ನಡೆದದ ಕುಖ್ಯಾತ ರೌಡಿಶೀಟರ್ ಕಾಲಿಯಾ ರಫೀಕ್​ನ ಹತ್ಯೆ ಪ್ರಕರಣದಲ್ಲಿ ಮಂಗಳೂರು ಪೊಲೀಸರಿಗೆ ಬೇಕಾಗಿದ್ದ ಮತ್ತೋರ್ವ ಆರೋಪಿ ಝಿಯಾ ಎಂಬಾತನನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಕೇರಳದ ಎಟಿಎಸ್ ತಂಡ ಬಂಧಿಸಿದೆ.

ಆರೋಪಿ ಝಿಯಾ ತನ್ನ ಪಾತಕ ಕೃತ್ಯಗಳಿಂದ ಕೇರಳ ಮತ್ತು ಮಂಗಳೂರು ಪೊಲೀಸರಿಗೆ ಬೇಕಾಗಿದ್ದ. ಝಿಯಾ ರೌಡಿಶೀಟರ್ ಕಾಲಿಯಾ ರಫೀಕ್ ಮತ್ತು ತಸ್ಲೀಮ್ ಹತ್ಯೆ ಪ್ರಕರಣದ ಆರೋಪಿ.

ಕಾಲಿಯಾ ರಫೀಕ್ ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳವನ್ನು ಕೇಂದ್ರೀಕರಿಸಿಕೊಂಡು ತನ್ನ ಕಾರ್ಯಾಚರಣೆ ನಡೆಸುತ್ತಿದ್ದ. ಈತನನ್ನು ಕೆಲ ವರ್ಷಗಳ ಹಿಂದೆ ಮಂಗಳೂರಿನ ಕೋಟೆಕಾರಿನಲ್ಲಿ ಅಟ್ಟಾಡಿಸಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಮಂಗಳೂರು ಪೊಲೀಸರಿಗೆ ಝಿಯಾ ಬೇಕಾಗಿದ್ದ.

ಆ ನಂತರ ಈತ ಕೇರಳದಲ್ಲಿ ತಸ್ಲೀಮ್ ಎಂಬಾತನ ಹತ್ಯೆ ಪ್ರಕರಣ, ಬಾಲಿಕಾ ಅಜೀಜ್ ಹತ್ಯೆ ಪ್ರಕರಣದಲ್ಲಿ ಮಂಜೇಶ್ವರ ಪೊಲೀಸರಿಗೆ ಬೇಕಾಗಿದ್ದ ಎನ್ನಲಾಗಿದೆ.

ಕೇರಳದ ಪೈವಳಿಕೆ ನಿವಾಸಿಯಾಗಿರುವ ಈತ ಹತ್ಯೆಗಳ ನಂತರ ವಿದೇಶಕ್ಕೆ ಪರಾರಿಯಾಗಿದ್ದ. ಇತ್ತೀಚೆಗೆ ವಿದೇಶದಿಂದ ಬಂದಿದ್ದ ಈತ ಮತ್ತೆ ವಾಪಸ್​ ತೆರಳಲು ಗುರುವಾರ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿದ್ದ ವೇಳೆ ಕೇರಳದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿದ್ದಾರೆ.

Comments are closed.