ಕರ್ನಾಟಕ

ಬಸ್​ನಲ್ಲಿದ್ದ ಪುನೀತ್​ ಫೋಟೋಗೆ ಮುತ್ತಿಟ್ಟು ಕಂಬನಿ ಸುರಿಸಿದ ಅಜ್ಜಿ; ವಿಡಿಯೋ ವೈರಲ್

Pinterest LinkedIn Tumblr

ಕೊಪ್ಪಳ: ಬಸ್ಸಿನಲ್ಲಿದ್ದ ಅಪ್ಪು ಫೋಟೋ ಮುಂದೆ ಅಜ್ಜಿ ಕಣ್ಣೀರು ಹಾಕುತ್ತಿದ್ದಾರೆ. ತನ್ನ ಸೀರೆ ಸೆರಗಿನಲ್ಲಿ ಫೋಟೋ ಒರೆಸಿ ತನ್ನ ಅಭಿಮಾನ ತೋರಿದ್ದಾರೆ. ಆ ಮನಕಲುಕುವ ವಿಡಿಯೋ ಸದ್ಯ ವೈರಲ್ ಆಗಿದೆ. ಕೊಪ್ಪಳ ಜಿಲ್ಲೆಯ ಕುಕನೂರು ಬಸ್​ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಪುನೀತ್​ ರಾಜ್​ಕುಮಾರ್​ ಅವರನ್ನಹ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಇಷ್ಟಪಡುತ್ತಾರೆ. ಇತ್ತೀಚೆಗೆ ಪುನೀತ್​ ಹೃದಯಾಘಾತದಿಂದ ಮೃತಪಟ್ಟ ಘಟನೆಯಿಂದ ಕೋಟ್ಯಂತರ ಅಭಿಮಾನಿಗಳು ದುಃಖಿತರಾಗಿದ್ದಾರೆ. ಇನ್ನು ಬಸ್ ನಿಲ್ದಾಣದವೊಂದರಲ್ಲಿ ಬಸ್​ ಮೇಲೆ ಅಂಟಿಸಿದ್ದ ಜಾಹೀರಾತಿನಲ್ಲಿ ಇರುವ ಪುನೀತ್ ಫೋಟೋಗೆ ವೃದ್ಧೆಯೊಬ್ಬರು ಮುತ್ತಿಟ್ಟು ಕಂಬನಿ ಸುರಿಸಿದ್ದಾರೆ. ತಮ್ಮ ಸೀರೆ ಸೆರಗು, ಕೈಯಿಂದ ಫೋಟೋ ಒರೆಸಿದ್ದು ಪುನೀತ್​ ಭಾವಚಿತ್ರಕ್ಕೆ ಅಜ್ಜಿ ಮುತ್ತಿಟ್ಟು ಕಣ್ಣೀರು ಹಾಕುತ್ತಿರುವ ಆ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆ ಆಗಿದ್ದು ಸೋಶಿಯಲ್​ ಮೀಡಿಯಾದಲ್ಲಿ ಬಾರೀ ವೈರಲ್​ ಆಗಿದೆ.

Comments are closed.