
ಮಂಗಳೂರು : ಮನುಕುಲದ ಉದ್ಧಾರಕ್ಕೆ ಪಂಚಗವ್ಯಗಳನ್ನು ನೀಡುವ ಪುಣ್ಯ ಜೀವಿ ಗೋಮಾತೆಯ ಒಡಲು ತುಂಬಿಸುವ ಪವಿತ್ರ ಕಾರ್ಯದ ನಿಟ್ಟಿನಲ್ಲಿ ನವೆಂಬರ್ 14 ಆದಿತ್ಯವಾರದಂದು ಪಜೀರು ಗೋಶಾಲೆಯಲ್ಲಿ ಸಾರ್ವಜನಿಕ ಗೋಪೂಜೆ ಮತ್ತು ಗೋವಿನ ಮೇವಿಗಾಗಿ ” ಹೊರೆಕಾಣಿಕೆ ಅರ್ಪಣೆ” ಕಾರ್ಯಕ್ರಮವು ನಡೆಯಲಿದೆ ಎಂದು ಗೋವನಿತಾಶ್ರಯ ಟ್ರಸ್ಟ್ ಕೋಶಾಧಿಕಾರಿ ಶರಣ್ ಪಂಪುವೆಲ್ ತಿಳಿಸಿದ್ದಾರೆ.
ನಗರದಲ್ಲಿ ಕರೆದ ಪತ್ರಿಕಾಗೋಷ್ಠ್ಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 2 ಗಂಟೆಗೆ ಜಿಲ್ಲೆಯ ವಿವಿಧ ಸ್ಥಳಗಳಿಂದ ಬಂದ ಹೊರೆಕಾಣಿಕೆ ಮಂಗಳೂರಿನ ಕದ್ರಿ ದೇವಸ್ಥಾನಾದಿಂದ ಗೋಶಾಲೆಗೆ “ಗೋಕಾಣಿಕಾ ಮೆರವಣಿಗೆ’ ನಡೆಯಲಿದ್ದು ಪಜೀರು ಗೋಶಾಲೆಯ ವಠಾರದಲ್ಲಿ ಗೋಭಕ್ತರ ಹೊರೆಕಾಣಿಕೆ ಜಾಥಾದ ಅಭೂತಪೂರ್ವ ಸಂಗಮಗೊಳ್ಳಲಿದೆ. ಮತ್ತು ಸಂಜೆ 5 :30 ಗಂಟೆಗೆ ಗೋಶಾಲೆಯಲ್ಲಿ ಸಾಮೂಹಿಕ ಗೋಪೂಜೆ ನಡೆಯಲಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪೂಜ್ಯ ಮಠಾಧೀಶರು, ಸಾಧುಸಂತರು, ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸಲಿದ್ದಾರೆ. ಈ ಗೋಸಂರಕ್ಷಣಾ ದೇವತಾ ಕಾರ್ಯದಲ್ಲಿ ಜಿಲ್ಲೆಯ ಸಮಸ್ತ ಭಂದುಗಳು ಭಾಗವಹಿಸಿ ಪುಣ್ಯ ಕಾರ್ಯದಲ್ಲಿ ಕೈ ಜೋಡಿಸ ಬೇಕು ಎಂದು ಗೋವನಿತಾಶ್ರಯ ಟ್ರಸ್ಟ್ ಮತ್ತು ವಿಶ್ವ ಹಿಂದು ಪರಿಷತ್ ವಿನಂತಿಸುತ್ತದೆ ಎಂದು ಶರಣ್ ಪಂಪುವೆಲ್ ತಿಳಿಸಿದರು.
400 ಕ್ಕೂ ಹೆಚ್ಚು ದನಕರುಗಳನ್ನು ಪಾಲನೆ ಪೋಷಣೆ :
ಗೋವು ನಮ್ಮೆಲ್ಲರ ಸಂಪೂಜ್ಯತೆಯ ಪ್ರತೀಕ, ಮನುಕುಲಕ್ಕೆ ಸದಾ ಉಪಕಾರಿ. ಗೋವಂಶದ ಉಳಿವಿಗಾಗಿ ವಿಶ್ವ ಹಿಂದು ಪರಿಷತ್ ಹಲವಾರು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದೆ. ಗೋವುಗಳ ಪೋಷಣೆಯ ಪಾಲನೆಯ ನಿಟ್ಟಿನಲ್ಲಿ ಕಳೆದ 21 ವರ್ಷಗಳಿಂದ ವಿಶ್ವ ಹಿಂದು ಪರಿಷತ್ತಿನ ನೇತೃತ್ವದಲ್ಲಿ ಮುಖಾಂತರ ಗೋವನಿತಾಶ್ರಯ ಟ್ರಸ್ಟಿನ ಹೆಸರಿನಲ್ಲಿ ಗೋಶಾಲೆಯನ್ನು ನಿರ್ಮಿಸಿದ್ದು. ಸುಮಾರು 400 ಕ್ಕೂ ಹೆಚ್ಚು ದನಕರುಗಳನ್ನು ಪಾಲನೆ ಪೋಷಣೆ ಮಾಡುತ್ತಿದ್ದೇವೆ.
ಮಂಗಳೂರು ಮಹಾನಗರದಿಂದ 22 ಕಿಮೀ ದೂರದ ಪಜೀರಿನಲ್ಲಿ, 10 ಎಕರೆ ವಿಶಾಲ ನಿವೇಶನದಲ್ಲಿ ಈ ಗೋಶಾಲೆ ಇದ್ದು ನಿರ್ಗತಿಕ, ಕಟುಕರ ಕೈಯಿಂದ ರಕ್ಷಿಸಿದ ಗೋವುಗಳನ್ನು ಈ ಗೋಶಾಲೆಯ ಮೂಲಕ ಸಾಕುತ್ತಿದೇವೆ. ಪ್ರತಿ ತಿಂಗಳು ಸುಮಾರು 8 ಲಕ್ಷ ರೂಪಾಯಿಯಷ್ಟು ಆಗಾಧ ಮೊತ್ತವನ್ನು ದಾನಿಗಳಿಂದ ಮತ್ತು ಗೋಪೇಮಿಗಳಿಂದ ಸಂಗ್ರಹಿಸಿ ಗೋವುಗಳನ್ನು ಪ್ರೀತಿಯಿಂದ ಉಳಿಸಿ, ಬೆಳೆಸಲಾಗುತ್ತದೆ ಎಂದು ಶರಣ್ ಪಂಪುವೆಲ್ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಗೋವನಿತಾಶ್ರಯ ಟ್ರಸ್ಟ್ ಕಾರ್ಯದರ್ಶಿ ಮನೋಹರ್ ಸುವರ್ಣ, ಟ್ರಸ್ಟಿಗಳಾದ ಗೋಪಾಲ್ ಕುತ್ತಾರ್, ಶಿವಾನಂದ್ ಮೆಂಡನ್ ಮುಂತಾದವರು ಉಪಸ್ಥಿತರಿದ್ದರು.
Comments are closed.