ಕರ್ನಾಟಕ

ಕ್ಷಿಪ್ರ ಕಾರ್ಯಾಚರಣೆ; ಕುಶಾಲನಗರದಲ್ಲಿ ನಡೆದ 2 ಮನೆ ಕಳವು, ವಾಹನ ಕಳವು ಪ್ರಕರಣದ ಆರೋಪಿ ಬಂಧನ

Pinterest LinkedIn Tumblr

ಲಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಬಸವೇಶ್ವರ ಬಡಾವಣೆ ಹಾಗೂ ಕಾವೇರಿ ಬಡಾವಣೆಯಲ್ಲಿ ನಡೆದ ಎರಡು ಮನೆ ಕಳ್ಳತನ ಹಾಗೂ ದಂಡಿನಪೇಟೆಯಲ್ಲಿ ನಡೆದ ಒಂದು ವಾಹನ ಕಳವು ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಳ್ಳತನ ಪ್ರಕರಣಗಳ ಪತ್ತೆಗಾಗಿ ಕುಶಾಲನಗರ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು ನ.11 ರಂದು ರಾತ್ರಿ ಗಸ್ತಿನಲ್ಲಿದ್ದ ಎಎಸ್ಐ ಮಂಜುನಾಥ ಹಾಗೂ ಸಿಬ್ಬಂದಿಗಳು ವಾಹನ ತಪಾಸಣೆ ನಡೆಸುವ ಸಂದರ್ಭದಲ್ಲಿ ವಾಹನವೊಂದರಲ್ಲಿ ಬಂದ ಶಂಕಿತ ವ್ಯಕ್ತಿಯನ್ನು ತಡೆದು ಪರಿಶೀಲನೆ ನಡೆಸಿ ವ್ಯಕ್ತಿಯನ್ನು ವಿಚಾರಣೆ ನಡೆಸಿ ಮೇಲ್ಕಾಣಿಸಿದ ಪ್ರಕರಣಗಳನ್ನು ಪತ್ತೆಮಾಡಿದ್ದಾರೆ. ಆರೋಪಿಯಿಂದ ಕಳ್ಳತನ ಮಾಡಿದ 2 ಲಕ್ಷ ಮೌಲ್ಯದ 59.15 ಗ್ರಾಂ ತೂಕದ ಚಿನ್ನಾಭರಣ, 40,000 ಮೌಲ್ಯದ ಒಂದು ಹೊಂಡಾ ಆಕ್ಟೀವಾ, 70,000/0 ರೂ ಮೌಲ್ಯದ ಯಮಹಾ ಸ್ಕೂಟರ್ ಮತ್ತು 1 ಆಪಲ್ ಐಪೋನ್ ನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಈ ಕಾರ್ಯಾಚರಣೆಯು ಕುಶಾಲನಗರ ವೃತ್ತ ಸಿಪಿಐ ಎಂ. ಮಹೇಶ್ ನೇತೃತ್ವದಲ್ಲಿ ನಡೆದಿದ್ದು ಕಾರ್ಯಾಚರಣೆಯಲ್ಲಿ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಮಾದೇಶ್, ಎಎಸ್ಐ ಮಂಜುನಾಥ್, ಗೋಪಾಲ್, ಸಿಬ್ಬಂದಿಗಳಾದ ಪ್ರಕಾಶ್, ಟಿ.ಎಸ್.ಸಜಿ, ಅರುಣ್ ಕುಮಾರ್, ರಂಜಿತ್, ಸೌಮ್ಯ, ಚಾಲಕ ಶೇಷಪ್ಪ, ಸಿಡಿಆರ್ ವಿಭಾಗದ ಸಿಬ್ಬಂದಿಗಳಾದ ರಾಜೇಶ್ ಮತ್ತು ಗಿರೀಶ್  ಭಾಗಿಯಾಗಿದ್ದು, ಕಾರ್ಯಾಚರಣೆಯಲ್ಲಿ ಭಾಗಿಯಾದ ಪೊಲೀಸರ ಕಾರ್ಯವನ್ನು ಎಸ್ಪಿ ಶ್ಲಾಘಿಸಿದ್ದಾರೆ.

ಸಾರ್ವಜನಿಕರಲ್ಲಿ‌ ಎಸ್ಪಿ ಮನವಿ….
ಕೊಡಗು ಜಿಲ್ಲೆಯ ಸಾರ್ವಜನಿಕರು ಬೇರೆ ಊರುಗಳಿಗೆ ತೆರಳುವ ಸಂದರ್ಭದಲ್ಲಿ ಯಾವುದೇ ಬೆಲೆ ಬಾಳುವ ಚಿನ್ನಾಭರಣಗಳನ್ನು ಮನೆಯಲ್ಲಿಡಬಾರದೆಂದು ಹಾಗೂ ಹಾಗೆ ತೆರಳುವ ಸಂದರ್ಭದಲ್ಲಿ ತಮ್ಮ ಮನೆಗಳಲ್ಲಿ ಪರಿಚಯಸ್ಥರನ್ನು ಉಳಿದುಕೊಳ್ಳುವ ಬಗ್ಗೆ ನೋಡಿಕೊಳ್ಳುವುದು ಹಾಗೂ ಮನೆಯ ಹೊರಗೆ ಕಾಣುವಂತೆ ಬೀಗಗಳನ್ನು ಹಾಕದೇ ಒಳ್ಳೆಯ ಡೋರ್ ಲಾಕ್’ಗಳನ್ನು ಬಳಸುವಂತೆ ಹಾಗೂ ಮನೆಯ ಹೊರಗೆ ವಾಹನವನ್ನು ನಿಲ್ಲಿಸುವಾಗ ಸರಿಯಾದ ಭದ್ರತೆಯೊಂದಿಗೆ ನಿಲ್ಲಿಸಿ, ಇಂತಹ ಅಪರಾಧಗಳನ್ನು ತಡೆಗಟ್ಟುವಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕೆಂದು ಸಾರ್ವಜನಿಕರಲ್ಲಿ ಜಿಲ್ಲಾ ಎಸ್ಪಿ ಕೋರಿದ್ದಾರೆ.

Comments are closed.