ಪ್ರಮುಖ ವರದಿಗಳು

ಜನರಿಗೆ ದೀಪಾವಳಿ ಗಿಪ್ಟ್ ನೀಡಿದ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಸರ್ಕಾರ: ಪೆಟ್ರೋಲ್, ಡಿಸೆಲ್ ಬೆಲೆ ಇಳಿಕೆ..!

Pinterest LinkedIn Tumblr

ಬೆಂಗಳೂರು: ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಇಳಿಸಿರುವ ಬೆನ್ನಲ್ಲೇ ರಾಜ್ಯ ಸರ್ಕಾರವೂ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ತಲಾ 7 ರೂ. ಗಳಷ್ಟು ಕಡಿಮೆ ಮಾಡಿದೆ. ಈ‌ಮೂಲಕ ಜನರಿಗೆ ದೀಪಾವಳಿ ಗಿಪ್ಟ್ ನೀಡಿದಂತಾಗಿದೆ.

ಟ್ವೀಟ್ ಮೂಲಕ ಈ ವಿಷಯ ತಿಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಾಳೆ ಸಂಜೆಯಿಂದ ಈ ದರ ಜಾರಿಯಾಗಲಿದೆ ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಡೀಸಲ್ ಮೇಲೆ 10 ರೂ ಹಾಗೂ ಪೆಟ್ರೋಲ್ 05 ರೂ ಕಡಿಮೆಗೊಳಿಸಿದ್ದು ಸ್ವಾಗತಾರ್ಹ ಎಂದ ಅವರು ಜನರಿಗೆ ದೀಪಾವಳಿಯ ಉಡಗೊರೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Comments are closed.