ಕುಂದಾಪುರ: ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ವಿರುದ್ಧ ಬೈಂದೂರು ಹಿಂಜಾವೇ ವತಿಯಿಂದ ಬೈಂದೂರು ಅಂಡರ್ ಪಾಸ್ ಬಳಿ ಪ್ರತಿಭಟನೆ ನಡೆಸಿ ಭಾರತದ ಗೃಹ ಮಂತ್ರಿಗಳಿಗೆ ಬೈಂದೂರು ತಹಸೀಲ್ದಾರ್ ಶೋಭಾ ಲಕ್ಷ್ಮೀಯವರ ಮೂಲಕ ಆಗ್ರಹ ಪತ್ರ ನೀಡಲಾಯಿತು.

ಬಾಂಗ್ಲಾದೇಶದಲ್ಲಿ ನವರಾತ್ರಿಯ ಸಂದರ್ಭ ಪ್ರಾರಂಭವಾದ ಹಿಂದೂಗಳ ಮೇಲಿನ ಹಲ್ಲೆ , ಹಿಂದೂ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಹಿಂದೂ ಮಂದಿರಗಳ ಧ್ವಂಸ ಇವೆಲ್ಲವನ್ನು ತಕ್ಷಣ ತಡೆಯಬೇಕೆಂದು ಬಾಂಗ್ಲಾ ದೇಶದ ಮೇಲೆ ಒತ್ತಡ ಹೇರುವ ಕುರಿತು ಈ ಮನವಿ ಸಲ್ಲಿಸಲಾಗಿದೆ. ಭಾರತ ಸರ್ಕಾರ ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ಎಲ್ಲಾ ಹಿಂಸೆ ಅತ್ಯಾಚಾರಗಳನ್ನು ನಿಲ್ಲಿಸಲು ಕಠಿಣ ಕ್ರಮ ಕೈಗೊಳ್ಳಲು ಅಲ್ಲಿನ ಸರ್ಕಾರದ ಮೇಲೆ ಒತ್ತಡ ತರಬೇಕು. ಬಾಂಗ್ಲಾದೇಶಕ್ಕೆ ಒಂದು ನಿಯೋಗವನ್ನು ಕಳಿಸಿ ಅಲ್ಲಿನ ಹಿಂದೂಗಳ ಪರಿಸ್ಥಿತಿಯ ಬಗ್ಗೆ ಅಧ್ಯಯನ ನಡೆಸಿ ಅವರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಬೇಕು. ಅಲ್ಪಸಂಖ್ಯಾತ ನಾಗಿರುವ ಹಿಂದೂವಿನ ರಕ್ಷಣೆಗಾಗಿ ಹೊಸ ಕಾನೂನು ತರಲು ಬಾಂಗ್ಲಾ , ಸರಕಾರಕ್ಕೆ ಒತ್ತಾಯಿಸಬೇಕು. ಅಲ್ಲಿನ ಹಿಂದುಗಳಿಗೆ ನ್ಯಾಯ ಮತ್ತು ರಕ್ಷಣೆ ಒದಗಿಸಲು ಭಾರತ ಸರ್ಕಾರ ಕಾರ್ಯೋನ್ಮುಖವಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂ ಸೇವಕ ನವೀನ್ ಚಂದ್ರ ಉಪ್ಪುಂದ , ಹಿಂಜಾವೇ ಜಿಲ್ಲಾ ಕಾರ್ಯದರ್ಶಿ ಶಂಕರ್ ಕೋಟ, ಜಿಲ್ಲಾ ಪ್ರಚಾರ ಪ್ರಮುಖ್ ಪ್ರವೀಣ್ ಯಕ್ಷೀಮಠ, ವಿನೋದ್ ಹೆಬ್ಬಾರ್ ಕೊಲ್ಲೂರು , ಅಕ್ಷಯ್ ತಗ್ಗರ್ಸೆ, ವೇದನಾಥ್ ಹೆರಂಜಾಲು,ಹರೀಶ್ ಸೆಳ್ಕೋಡ್, ಪ್ರಶಾಂತ್ ಮೊಯ್ಲಿ, ಗೋಪಾಲ ವಸ್ರೇ, ಉಮೇಶ್ ಬಿಜೂರು, ಪ್ರಸಾದ್ ಬೈಂದೂರು, ನವೀನ್ ಗಂಗೊಳ್ಳಿ ಮತ್ತಿತರರು ಉಪಸ್ಥಿತರಿದ್ದರು.
Comments are closed.