ಕರಾವಳಿ

ಕುಂದಾಪುರ ಡಿವೈಎಸ್ಪಿ ಕಾರ್ಯಾಚರಣೆ: 1 ಕೆ.ಜಿ 810 ಗ್ರಾಂ ಗಾಂಜಾ, ಬ್ರೌನ್ ಶುಗರ್ ಸಹಿತ ಡ್ರಗ್ ಪೆಡ್ಲರ್ ಬಂಧನ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಕರಾವಳಿಯ ಹಲವೆಡೆ ಗಾಂಜಾ ಹಾಗೂ ಮಾದಕ ವಸ್ತುಗಳನ್ನು ಸರಬರಾಜು ಮಾಡುವ ಪೆಡ್ಲರ್ ಓರ್ವನನ್ನು ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ನೇತೃತ್ವದ ತಂಡ ಬಂಧಿಸಿದ ಘಟನೆ ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ನಡೆದಿದೆ.

(ಮಹಮ್ಮದ್ ಜಾಫರ್ ಗುಡುಮಿಯಾ)

ಉತ್ತರಕನ್ನಡ ಜಿಲ್ಲೆ ಕಾರವಾರ ಬಿಣಗಾ ಮೂಲದ ಮಹಮ್ಮದ್ ಜಾಫರ್ ಗುಡುಮಿಯಾ (28) ಬಂಧಿತ ಡ್ರಗ್ ಪೆಡ್ಲರ್ ಆಗಿದ್ದು ಆತನಿಂದ 40 ಸಾವಿರ ಮೌಲ್ಯದ 1 ಕೆ.ಜಿ 810 ಗ್ರಾಂ ಗಾಂಜಾ, 10 ಸಾವಿರ ಮೌಲ್ಯದ 1 ಗ್ರಾಂ ಬ್ರೌನ್ ಶುಗರ್ ಹಾಗೂ ಮೊಬೈಲ್ ಫೋನುಗಳನ್ನು ವಶಕ್ಕೆ ಪಡೆಯಲಾಗಿದೆ.

ಘಟನೆ ವಿವರ:
ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಅವರು ಗುರುವಾರ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಶಾಸ್ತ್ರೀ ವೃತ್ತ ಬಳಿ ಅನುಮಾನಾಸ್ಪದವಾಗಿ ಕಂಡು ಬಂದ ವ್ಯಕ್ತಿಯನ್ನು ವಿಚಾರಿಸಿದಾಗ ಆತ ಮಾದಕ ವಸ್ತುಗಳನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುತ್ತಿರುವುದು ಕಂಡುಬಂದಿದ್ದು ಆತನನ್ನು ಬಂಧಿಸಲಾಗಿದ್ದು ಬಳಿಕ ಆತನನ್ನು ಕುಂದಾಪುರ ನಗರ ಠಾಣೆಗೆ ಹಸ್ತಾಂತರ ಮಾಡಲಾಗಿದೆ. ಬಂಧಿತ ಆರೋಪಿ ಗಾಂಜಾ ಸಹಿತ ಕೆಲ ಮಾದಕ ವಸ್ತು ಸರಬರಾಜು ಮಾಡುವ ಫೆಡ್ಲರ್ ಆಗಿದ್ದು ಕಾಸರಗೋಡು ಹಾಗೂ ಇತರ ಕಡೆಗಳಿಂದ ಡ್ರಗ್ಸ್ ಅನ್ನು ಉಡುಪಿ ಜಿಲ್ಲೆ ಸಹಿತ ಗೋವಾ ಮೊದಲಾದೆಡೆ ವಿಕ್ರಯ ಮಾಡುತ್ತಿದ್ದ ಎಂಬುದು ತನಿಖೆ ವೇಳೆ ತಿಳಿದಿದೆ ಎನ್ನಲಾಗಿದೆ.

(ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ.)

ಕ್ಷಿಪ್ರ ಕಾರ್ಯಾಚರಣೆ..
ಉಡುಪಿ ಜಿಲ್ಲಾ ಎಸ್ಪಿ ವಿಷ್ಣುವರ್ಧನ್ ಎನ್. ನಿರ್ದೇಶನದಲ್ಲಿ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಕುಂದಾಪುರ ಉಪವಿಭಾಗದ ಉಪಾಧೀಕ್ಷಕ ಶ್ರೀಕಾಂತ್ ಕೆ. ಹಾಗೂ ಡಿವೈಎಸ್ಪಿ ಕಚೇರಿಯ ಅಪರಾಧ ವಿಭಾಗದ ಸಿಬ್ಬಂದಿಗಳಾದ ರಾಘವೇಂದ್ರ ಉಪ್ಪುಂದ, ರಾಮು ಹೆಗ್ಡೆ, ವಿಜಯ ಕುಂದಾಪುರ, ರಮೇಶ್ ಕುಲಾಲ್, ಕುಂದಾಪುರ ಪೊಲೀಸ್ ಠಾಣೆಯ ರಾಘವೇಂದ್ರ ಮೊಗೇರ, ವಿಜೇತ್, ಜೀಪು ಚಾಲಕ ರಾಜು ಈ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಇದ್ದರು.

Comments are closed.