ಕರಾವಳಿ

ಅಂತರ್ ಜಿಲ್ಲಾ ಖತರ್ನಾಕ್ ಕಳ್ಳನನ್ನು ಬಂಧಿಸಿದ ಉಡುಪಿ ಪೊಲೀಸರು

Pinterest LinkedIn Tumblr

ಉಡುಪಿ: ಉಡುಪಿ ನಗರದ ಮಂಜುನಾಥ್ ಕಣ್ಣಿನ ಆಸ್ಪತ್ರೆ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ್ದ ಅಂತರರಾಜ್ಯ ಕಳ್ಳನನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಸೇರಿದಂತೆ ಕೆಲವು ಕಡೆಗಳಲ್ಲಿ ಆರೋಪಿಯು ಕಳ್ಳತನ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಬಂಧಿತ ಆರೋಪಿಯು ಕಾರ್ಕಳದ ನಿವಾಸಿ‌ ಸುರೇಶ್ ಪೂಜಾರಿ. ಬಂಧಿತನಿಂದ ನಗದು ರೂ. 4,33,000/-, 2 ಮೋಟಾರ್‌ ಸೈಕಲ್‌ಗಳು ಹಾಗೂ 2 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂಜುನಾಥ್ ಕಣ್ಣಿನ ಆಸ್ಪತ್ರೆಯ ಶೆಟರ್ ಒಡೆದು ಸುಮಾರು 4,79,500 ರೂಪಾಯಿ ಮೌಲ್ಯದ ಸೊತ್ತುಗಳನ್ನು ಕಳ್ಳತನ ಮಾಡಿದ್ದ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಅ.ಕ್ರ 138 /2021, ಕಲಂ 457,380 ಐ.ಪಿ.ಸಿ ರಂತೆ ಪ್ರಕರಣ ದಾಖಲಾಗಿತ್ತು.

ಆರೋಪಿ ಚಹರೆ ಗುರುತಿಸಿ ಪೊಲೀಸರು ಉಡುಪಿ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಬಳಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಶಿರ್ವ, ಹಿರಿಯಡ್ಕ, ಕಾರ್ಕಳ ನಗರ ಠಾಣೆ, ಪಡುಬಿದ್ರಿ, ದಾವಣಗೆರೆ , ಬೆಳಗಾಂ, ಮೂಲ್ಕಿ ಗಳಲ್ಲಿ ಕಳ್ಳತನ ನಡೆಸಿದ್ದು ಇತ್ತಿಚೆಗೆ ಉಡುಪಿಯ ಮಂಜುನಾಥ ಕಣ್ಣಿನ ಆಸ್ಪತ್ರೆ, ಉಡುಪಿ ಮತ್ತು ಮಲ್ಪೆ ಸೋಸೈಟಿಯಲ್ಲಿ ನಗದು ಹಾಗೂ ಉಡುಪಿಯ ಗರಡಿ ರಸ್ತೆಯಲ್ಲಿ ಬೈಕ್ ಕಳ್ಳತನ ನಡೆಸಿರುವುದನ್ನು ಒಪ್ಪಿಕೊಂಡಿದ್ದಾನೆ.

ಪ್ರಕರಣದಲ್ಲಿ ಆರೋಪಿ ಪತ್ತೆಯ ಬಗ್ಗೆ ಉಡುಪಿ ಪೊಲೀಸ್‌ ಅಧೀಕ್ಷಕ ಎನ್‌. ವಿಷ್ಣುವರ್ಧನ್‌ ಆದೇಶದಂತೆ, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಉಡುಪಿ ಡಿವೈಎಸ್ಪಿ ಸುಧಾಕರ ಸದಾನಂದ ನಾಯ್ಕ್, ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ ಕುಮಾರ್ ಪಿ, ಪ್ರೋಬೆಷನರಿ ಪಿಎಸ್‌ಐ ರವರಾದ ಸುಹಾಸ್‌ ಆರ್‌, ಪ್ರಸಾದ್‌ಕುಮಾರ್‌, ಎಎಸ್‌ಐ ಜಯಕರ, ಅರುಣ್‌ ಸಿಬ್ಬಂದಿಯವರಾದ ಲೋಕೇಶ್‌, ಸಂತೋಷ ರಾಠೋಡ್, ಬಾಲಕೃಷ್ಣ, ರಿಯಾಜ್‌ ಅಹಮ್ಮದ್‌, ರಾಜೇಶ್‌, ದೇವರಾಜ್‌, ಕಿರಣ್, ಚೇತನ್‌, ಆನಂದ ಗಾಣಿಗ, ವಿಶ್ವನಾಥ ಶೆಟ್ಟಿ, ಹೇಮಂತ್‌, ಕಾರ್ತಿಕ್‌, ಲಿಂಗರಾಜು, ರಾಕೇಶ್‌ರವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Comments are closed.