ಕರಾವಳಿ

ಓದಿನಲ್ಲಿ ಆಸಕ್ತಿಯಿಲ್ಲದೆ ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಮಕ್ಕಳು‌ ಮಂಗಳೂರಿನಲ್ಲಿ ಪತ್ತೆ

Pinterest LinkedIn Tumblr

ಮಂಗಳೂರು: ಓದಿನಲ್ಲಿ ಆಸಕ್ತಿ‌ ಇಲ್ಲ ಹಾಗೂ ಕ್ರೀಡೆಯಲ್ಲಿ ಆಸಕ್ತಿ ಇರುವುದಾಗಿ ಪತ್ರ ಬರೆದು ಬೆಂಗಳೂರಿನಿಂದ ಮನೆ ಬಿಟ್ಟಿದ್ದ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಮಕ್ಕಳ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ.

ಓದಿನಲ್ಲಿ ಆಸಕ್ತಿ‌ ಇಲ್ಲವೆಂದು ನಾಪತ್ತೆಯಾಗಿದ್ದ ಏಳು ಮಕ್ಕಳ ಪೈಕಿ ಮೂವರು ಮೈಸೂರಿನಲ್ಲಿ ಪತ್ತೆಯಾಗಿದ್ದರು. ಮತ್ತೊಂದು ಪ್ರಕರಣದಲ್ಲಿ ನಾಲ್ವರು ಮಕ್ಕಳು ನಾಪತ್ತೆಯಾಗಿ ಮಂಗಳೂರಿನ ಕೆಎಂಸಿ ಸಮೀಪ ಪತ್ತೆಯಾಗಿದ್ದಾರೆ.

ನಾಲ್ವರು ಮಕ್ಕಳು ಸದ್ಯ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸರ ಸುಪರ್ಧಿಯಲ್ಲಿದ್ದು, ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರಿಗೆ ಹಸ್ತಾಂತರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Comments are closed.