ಕರಾವಳಿ

ಮಂಗಳೂರಿನ ಚಿಲಿಂಬಿಗುಡ್ಡೆಯಲ್ಲಿ ಯುವತಿಯರೊಂದಿಗೆ ಬಂದು ‘ಮಾದಕ’ ವಸ್ತು ಸೇವನೆ; ಯುವಕರ ಬಂಧನ

Pinterest LinkedIn Tumblr

ಮಂಗಳೂರು: ಯುವತಿಯರೊಂದಿಗೆ ಬಂದು ಮಾದಕ ವಸ್ತು ಸೇವಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರ ಮೇಲೆ ಪೋಕ್ಸೊ ಮತ್ತು ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಭಾನುವಾರ ಸಂಜೆ ನಗರದ ಹೊರವಲಯದಲ್ಲಿರುವ ಗುರುಪುರ ಬಳಿಯ ಚಿಲಿಂಬಿ ಗುಡ್ಡೆಯಲ್ಲಿ ಯುವಕರು ಮಾದಕ ವಸ್ತು ಸೇವನೆ ಮಾಡುತ್ತಿದ್ದರು. ಇಬ್ಬರು ಹುಡುಗಿಯರ ಜೊತೆ ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಯುವಕರು ಬಂದಿದ್ದರು. ಈ ವೇಳೆ ಭಜರಂಗದಳದ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

ವಿಚಾರಣೆ ನಡೆಸಿದಾಗ ಅವರ ಜೊತೆಗಿದ್ದ ಓರ್ವಳು ಅಪ್ರಾಪ್ತೆ ಎಂಬುದಾಗಿ ತಿಳಿದುಬಂದಿದೆ. ಇನ್ನು ಯುವಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಡ್ರಗ್ಸ್ ಸೇವನೆ ಪಾಸಿಟಿವ್ ರಿಪೋರ್ಟ್ ಬಂದಿದೆ.

ಬಾಲಕಿ ಮನೆಯವರು ನೀಡಿದ ದೂರಿನ ಆಧಾರದ ಮೇಲೆ ಎಕೋನಾಮಿಕ್ ಅಂಡ್ ನಾರ್ಕೋಟಿಕ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

Comments are closed.