ಅಂತರಾಷ್ಟ್ರೀಯ

23ನೇ ಬರ್ತ್ ಡೇ ಆಚರಿಸಿಕೊಳ್ಳುತ್ತಿರುವ ಜನಪ್ರಿಯ ಸರ್ಚ್ ಎಂಜಿನ್ ‘ಗೂಗಲ್’..!: Happy Birthday Google

Pinterest LinkedIn Tumblr

ವಾಷಿಂಗ್ಟನ್: ಜಗತ್ತಿನಲ್ಲಿಯೇ ಅತೀ ಜನಪ್ರಿಯ ಜಾಲತಾಣ ಸಂಸ್ಥೆ ‘ಗೂಗಲ್’ ಇಂದು (ಸೆಪ್ಟೆಂಬರ್ 27) ರಂದು 23 ನೇ ಜನ್ಮದಿನವನ್ನು ಆಚರಿಸುತ್ತಿದೆ. ವಿವಿಧ ಭಾಷೆಗಳ ಹಲವು ಮಾಹಿತಿಗಳಿಗಾಗಿ ಜನರು ಬಹಳಷ್ಟು ಹುಡುಕಾಡುವ ಸಂಸ್ಥೆ ಗೂಗಲ್ ಆಗಿದೆ‌.

1998ರಂದು ಗೂಗಲ್ ಸಂಸ್ಥೆಯನ್ನು ಹುಟ್ಟುಹಾಕಿದ್ದು ಸೆ. 27ರಿಂದ ಅಧಿಕೃತವಾಗಿ ಗೂಗಲ್ ಸರ್ಚ್ ಎಂಜಿನ್ ಕಾರ್ಯಾರಂಭಿಸಿತು. ಆ ದಿನವನ್ನು ಗೂಗಲ್ ಹುಟ್ಟುಹಬ್ಬವನ್ನಾಗಿ ಸಂಭ್ರಮಿಸಲಾಗುತ್ತಿದೆ. ಗೂಗಲ್ ಜನ್ಮದಿನದ ಅಂಗವಾಗಿ, ಹೋಮ್‌ ಪೇಜ್‌ನಲ್ಲಿ ಆಕರ್ಷಕ ಡೂಡಲ್ ಒಂದನ್ನು ಗೂಗಲ್ ಪ್ರಕಟಿಸಿದೆ.

ಡೋನಟ್ ಮತ್ತು ಕೇಕ್, ಕ್ಯಾಂಡಲ್ ಸಹಿತ ಇರುವ ಗೂಗಲ್ ಡೂಡಲ್ ಮೇಲೆ ಕ್ಲಿಕ್ ಮಾಡಿದಾಗ ತೆರೆದುಕೊಳ್ಳುವ ಪುಟದಲ್ಲಿ ಗೂಗಲ್ ಕುರಿತ ಮಾಹಿತಿಯನ್ನು ಪಡೆದುಕೊಳ್ಳಬಹುದು.

Comments are closed.