ಕರ್ನಾಟಕ

ಅಕ್ಟೋಬರ್ 1ರಿಂದ ಷರತ್ತಿನೊಂದಿಗೆ ಚಿತ್ರಮಂದಿರದಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ

Pinterest LinkedIn Tumblr

ಬೆಂಗಳೂರು: ಅಕ್ಟೋಬರ್ 1ರಿಂದ ಚಿತ್ರಮಂದಿರಕ್ಕೆ ಶೇಕಡ ನೂರರಷ್ಟು ಹಾಜರಾತಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ್ದು ಕೆಲ ನಿಯಮಗಳನ್ನು ವಿಧಿಸಿದೆ.

ಶೇ.1 ಕ್ಕಿಂತ ಕಡಿಮೆ ಕೋವಿಡ್ ಪ್ರಕರಣವಿರುವ ಭಾಗಗಳಲ್ಲಿ ಮಾತ್ರ ಶೇ.100 ರಷ್ಟು ಚಿತ್ರಮಂದಿರ ತುಂಬಲು ಅವಕಾಶ ಕಲ್ಪಿಸಿದ್ದು, ಶೇ.1 ಕ್ಕಿಂತ ಪ್ರಕರಣ ಹೆಚ್ಚಿರುವ ಕಡೆ ಶೇ.50 ಹಾಗೂ ಶೇ.2 ಕ್ಕಿಂತ ಕೋವಿಡ್ ಪ್ರಕರಣ ಹೆಚ್ಚಿರುವ ಭಾಗಗಳಲ್ಲಿ ಚಿತ್ರಮಂದಿರ ಬಂದ್ ಮಾಡುವುದಾಗಿಯೂ ಹಾಗೂಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸುವವರು ಕೋವಿಡ್ ಮೊದಲನೇ ಲಸಿಕೆಯನ್ನಾದರೂ ಕಡ್ಡಾಯವಾಗಿ ಪಡೆದಿರಬೇಕೆಂಬ ನಿಯಮದ ಜೊತೆಗೆ ಗರ್ಭಿಣಿ ಹಾಗೂ ಮಕ್ಕಳಿಗೆ ಚಿತ್ರಮಂದಿರದಲ್ಲಿ ಅವಕಾಶ ನೀಡದಿರಲು ನಿರ್ಧರಿಸಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲಿನ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಉನ್ನತ ಮಟ್ಟದ ತಜ್ಞರ ಸಮಿತಿ ಸಭೆ ನಡೆಯಿತು.

ಸಭೆಯಲ್ಲಿ ರಾಜ್ಯದಲ್ಲಿ ಪ್ರಸ್ತುತ ಸರಾಸರಿ ಕೋವಿಡ್ ಪ್ರಕರಣಗಳು ಶೇ.0.66 ಬಗ್ಗೆ ಸಂಬಂಧಿಸಿದವರಿಂದ ಸಿಎಂ ಮಾಹಿತಿ ಪಡೆದರು.ರಾತ್ರಿ ಕರ್ಫ್ಯೂವನ್ನು ರಾತ್ರಿ 10 ರಿಂದ ಬೆಳಿಗ್ಗೆ 5ರವರೆಗೆ ನಿಗದಿ ಪಡಿಸಿ, 6-12 ನೇ ತರಗತಿವರೆಗೆ ಶೇ.100 ರಷ್ಟು ಹಾಜರಾತಿಯಂತೆ ವಾರದಲ್ಲಿ 5 ದಿನ ಶಾಲಾ ಕಾಲೇಜು ನಡೆಸಲು ತೀರ್ಮಾನಿಸಲಾಯಿತು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಅಕ್ಟೋಬರ್ 3 ರಿಂದ ಪಬ್ ಗಳಿಗೆ ಅನುಮತಿ ನೀಡಲು ಹಾಗೂ 1-5 ಶಾಲೆಗಳನ್ನು ಸದ್ಯಕ್ಕೆ ತೆರೆಯದಿರಲು ನಿರ್ಧರಿಸುವುದಾಗಿ ಹೇಳಿದರು.

ಸಭೆಯಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ, ಕಂದಾಯ ಸಚಿವ ಆರ್ ಅಶೋಕ, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Comments are closed.