ಕರ್ನಾಟಕ

ಸ್ಲೈಕ್ಲಿಂಗ್ ಕ್ರೀಡಾಪಟು ಪವಿತ್ರಾ ಕುರ್ತಕೋಟಿಗೆ 5 ಲಕ್ಷದ ಸೈಕಲ್ ಹಸ್ತಾಂತರಿಸಿದ ಸಿಎಂ‌‌ ಬೊಮ್ಮಾಯಿ

Pinterest LinkedIn Tumblr

ಬೆಂಗಳೂರು: ಗದಗ ಜಿಲ್ಲೆಯ ರಾಷ್ಟ್ರಮಟ್ಟದ ಸೈಕ್ಲಿಂಗ್ ಕ್ರೀಡಾಪಟು ಕುಮಾರಿ ಪವಿತ್ರಾ ಕುರ್ತಕೋಟಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ಸೈಕಲ್ ಪ್ರದಾನ ಮಾಡಿದರು.

ಆ ಬಳಿಕ ಮಾತನಾಡಿ, ರಾಷ್ಟ್ರಮಟ್ಟದ ಸ್ಲೈಕ್ಲಿಂಗ್ ಕ್ರೀಡಾಪಟುವಾಗಿರುವ ಪವಿತ್ರಾ ಅವರಿಗೆ ಸೈಕಲ್ ಅಗತ್ಯವಿರುವ ಬಗ್ಗೆ ಖಾಸಗಿ ವಾಹಿನಿಯೊಂದರ ಸಂದರ್ಶನ ಸಂದರ್ಭದಲ್ಲಿ ತಿಳಿದುಬಂದ ಹಿನ್ನೆಲೆಯಲ್ಲಿ ಇಲಾಖೆಗೆ ವಿಷಯ ಮುಟ್ಟಿಸಲಾಗಿತ್ತು. ಕೇವಲ 8 ದಿನಗಳಲ್ಲಿ ಕೆನಡಾದಿಂದ ಸೈಕಲ್ ತರಿಸಿಕೊಡುವ ಕೆಲಸವನ್ನು ಯೋಜನಾ ಮತ್ತು ಯುವ ಸಬಲೀಕರಣ, ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮಾಡಿದ್ದಾರೆ. ಸರ್ಕಾರದ ಅನುದಾನ ಪಡೆಯದೆ ದೇಣಿಗೆ ಪಡೆದು ಈ ಕಾರ್ಯವನ್ನು ಮಾಡಿರುವುದಾಗಿ ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪವಿತ್ರಾ ಕುರ್ತಕೋಟಿ ಪಟಿಯಾಲದಲ್ಲಿ ಏರ್ಪಡಿಸಿರುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದು, ಚಿನ್ನದ ಪದಕ ಗೆಲ್ಲುವಂತಾಗಲಿ ಎಂದು ಹಾರೈಸಿದರು. ಅಂತಾರಾಷ್ಟ್ರೀಯ ಮಟ್ಟದ ಸ್ಲೈಕ್ಲಿಂಗ್ ಟ್ರಾಕ್ ನ್ನು ವಿಜಯಪುರದ ಮೇಲೊಡ್ರೋಮ್ ನಲ್ಲಿ ಶೀಘ್ರದಲ್ಲಿಯೇ ಕಾರ್ಯರಂಭ ಮಾಡಲಿದೆ ಎಂದರು.

ಈ ಸೈಕಲ್ ನ್ನು ಕೆನಡಾ ದೇಶದಿಂದ ತರಿಸಲಾಗಿದ್ದು, ಇದರ ವೆಚ್ಚ 5 ಲಕ್ಷ ರೂಪಾಯಿ ಆಗಿದೆ. ಎಂಬೆಸ್ಸಿ, ಬ್ಲಾಸಂ ಆಸ್ಪತ್ರೆ ಹಾಗೂ ಮಧುಸೂಧನ ಎಂಬುವರು ಸಿಎಸ್ ಆರ್ ನಿಧಿಯಿಂದ ವೆಚ್ಚವನ್ನು ಭರಿಸಿದ್ದಾರೆ.

 

Comments are closed.