ಪ್ರಮುಖ ವರದಿಗಳು

ತೆಲುಗು ನಟ ಸಾಯಿ ಧರ್ಮತೇಜ್ ಬೈಕ್ ಅಪಘಾತ, ಆಸ್ಪತ್ರೆಗೆ ದಾಖಲು

Pinterest LinkedIn Tumblr

ಹೈದರಾಬಾದ್: ಹೈದರಬಾದ್ ನಗರದ ದುರ್ಗಂ ಕೇಬಲ್ ಸೇತುವೆ ಬಳಿ ಕಳೆದ ರಾತ್ರಿ ಸ್ಪೋರ್ಟ್ಸ್ ಬೈಕ್ ಅಪಘಾತವಾಗಿ ತೆಲುಗು ನಟ ಸಾಯಿ ಧರ್ಮ ತೇಜ್ ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತದ ತೀವ್ರತೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಸಾಯಿ ಧರ್ಮ ತೇಜ್ ಅವರನ್ನು ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದ್ದು ಸದ್ಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

ಅವರ ಹೊಟ್ಟೆಯ ಮತ್ತು ಎದೆಯ ಭಾಗಕ್ಕೆ ಗಂಭೀರವಾಗಿ ಗಾಯವಾಗಿದೆ ಎಂದು ತಿಳಿದುಬಂದಿದೆ. ಖ್ಯಾತ ನಟ ಚಿರಂಜೀವಿ ಅವರ ಅಳಿಯನಾಗಿರುವ ಸಾಯಿ ಧರ್ಮ ತೇಜ್ ಅವರ ಸ್ಪೋರ್ಟ್ಸ್ ಬೈಕ್ ನ ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬೈಕ್ ಸ್ಕಿಡ್ ಆಗಿದ್ದರಿಂದ ಅಪಘಾತವಾಗಿದೆ ಎಂದು ಹೇಳಲಾಗುತ್ತಿದೆ. ಹೈದರಾಬಾದ್ ನ ಔಟರ್ ರಿಂಗ್ ರೋಡ್ ನಿಂದ ಸರ್ವಿಸ್ ರೋಡ್ ಗೆ ಪ್ರವೇಶಿಸುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಬೈಕ್ ಸ್ಕಿಡ್ ಆಗುತ್ತಿದ್ದಂತೆ ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡು ಸಾಯಿ ತೇಜ್ ಬಿದ್ದಿದ್ದಾರೆ. ಅಪಘಾತಕ್ಕೆ ಅತಿ ವೇಗವಾಗಿ ಬೈಕ್ ಚಾಲನೆ ಮಾಡಿದ್ದೇ ಕಾರಣ ಎಂದು ಪೊಲೀಸರು ಪ್ರಾಥಮಿಕ ತನಿಖೆಯಿಂದ ತಿಳಿಸಿದ್ದಾರೆ.

Comments are closed.