ಕರಾವಳಿ

ಕತ್ತು ಸೀಳಿ ಫೈನಾನ್ಸಿಯರ್ ಕೊಲೆ: ಶಂಕಿತ ಆರೋಪಿಯಾದ ಅಜೇಂದ್ರ ಶೆಟ್ಟಿ ಬಿಸಿನೆಸ್ ಪಾರ್ಟನರ್ ಅರೆಸ್ಟ್

Pinterest LinkedIn Tumblr

ಕುಂದಾಪುರ: ಫೈನಾನ್ಸ್ ಮಾಲೀಕ ಅಜೇಂದ್ರ ಶೆಟ್ಟಿ (33) ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ‌ ಪೊಲೀಸರು ಶಂಕಿತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆಂಬ ಮಾಹಿತಿಯಿದೆ. ಆದರೆ ಪೊಲೀಸ್ ಇಲಾಖೆ ಮಾತ್ರ ಈವರೆಗೂ ಬಂಧನವನ್ನು‌ ಅಧೀಕೃತವಾಗಿ ದೃಢಪಡಿಸಿಲ್ಲ.

(ಶಂಕಿತ ಆರೋಪಿ ಅನುಪ್ ಶೆಟ್ಟಿ)

ಅಜೇಂದ್ರ ಶೆಟ್ಟಿಯವರ ಫೈನಾನ್ಸ್ ಸಂಸ್ಥೆಯ ಪಾಲುದಾರ ಅನೂಪ್ ಶೆಟ್ಟಿ ಹಾಗೂ ಆತ ಕೊಲೆ ಬಳಿಕ ಪರಾರಿಯಾಗಲು ಬಳಸಿದ್ದ‌ ಅಜೇಂದ್ರ ಅವರ ಕಾರನ್ನು ವಶಕ್ಕೆ‌ ಪಡೆದಿದ್ದಾರೆ.

ಶುಕ್ರವಾರ ತಡರಾತ್ರಿ ಅಜೇಂದ್ರ ಶೆಟ್ಟಿಯವರ ಮೃತದೇಹ ಕಾಳಾವರದ ಫೈನಾನ್ಸ್ ಕಚೇರಿಯಲ್ಲಿ ಪತ್ತೆಯಾಗಿತ್ತು. ಅಜೇಂದ್ರ ಸಹೋದರ ಮಹೇಂದ್ರ ಶೆಟ್ಟಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಚುರುಕಿಗೊಳಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣ ಆರಂಭದಿಂದಲೂ ಫೈನಾನ್ಸ್ ಪಾಲುದಾರ ಅನೂಪ್‌ ಶೆಟ್ಟಿಯ ನಡೆಯ ಬಗ್ಗೆ ಪೊಲೀಸರಿಗೆ ಅನುಮಾನ ವ್ಯಕ್ತವಾಗಿತ್ತು. ಹತ್ಯೆಯಾದ ಬಳಿಕ ಮೊಬೈಲ್‌ ಸ್ವಿಚ್ ಆಫ್‌ ಮಾಡಿ ತಲೆಮರೆಸಿಕೊಂಡಿದ್ದಲ್ಲದೇ ಪರಾರಿಯಾಗಲು ಅಜೇಂದ್ರ ಅವರ ಹೊಸ ಕಾರನ್ನೇ ಬಳಸಿಕೊಂಡಿದ್ದ. ಪೊಲೀಸರು ಟೋಲ್‌ಗೇಟ್ ಗಳಲ್ಲಿ ಅಳವಡಿಸಿದ್ದ ಸಿಸಿ ಟಿವಿ ದೃಶ್ಯಾವಳಿಗಳ ಮೂಲಕ ಆರೋಪಿಯು ಉತ್ತರ‌ಕನ್ನಡ ಜಿಲ್ಲೆಯತ್ತ ಹೋಗಿರುವುದು ಖಚಿತಪಡಿಸಿಕೊಂಡಿದ್ದರು.

(ಕೊಲೆಯಾದ ಅಜೇಂದ್ರ ಶೆಟ್ಟಿ)

ಮೇಲ್ನೋಟಕ್ಕೆ ಹಣಕಾಸಿನ‌ ವ್ಯವಹಾರ ಹಾಗೂ‌ ಹೊಸ ಕಾರು ಖರೀದಿಯ ಬಗ್ಗೆ ವೈಷಮ್ಯದಿಂದಾಗಿ ಕೊಲೆ‌ ನಡೆಸಲಾಗಿದ್ದು ನಿಖರ ಕಾರಣ ತನಿಖೆ ಬಳಿಕವಷ್ಟೇ ತಿಳಿದುಬರಬೇಕಿದೆ.

ಇದನ್ನು ಓದಿರಿ:

ಫೈನಾನ್ಸ್ ಒಳಗೆ ಕತ್ತು ಸೀಳಿ ಕೊಲೆಗೈದು ಆತನ ಕಾರಲ್ಲೇ ಎಸ್ಕೇಪ್ ಆದ ಬಿಸಿನೆಸ್ ಪಾರ್ಟನರ್..?: ತನಿಖೆ ಚುರುಕು

ಹಣಕಾಸು ವಿಚಾರಕ್ಕೆ ಕುಂದಾಪುರ ಕಾಳಾವಾರದಲ್ಲಿ ಫೈನಾನ್ಶಿಯರ್ ಬರ್ಬರ ಕೊಲೆ

Comments are closed.