ಕರ್ನಾಟಕ

ಅನ್ ಲಾಕ್ 4.O: ನಾಳೆಯಿಂದಲೇ ಸಿನಿಮಾ ಥಿಯೇಟರ್ ಓಪನ್, ಜುಲೈ 26 ರಿಂದ ಪದವಿ ಕಾಲೇಜು ಪ್ರಾರಂಭ

Pinterest LinkedIn Tumblr

ಬೆಂಗಳೂರು: ರಾಜ್ಯದಲ್ಲಿ ಅನ್ ಲಾಕ್ 4.O ಜಾರಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ನಾಳೆಯಿಂದಲೇ ರಾಜ್ಯಾದ್ಯಂತ ಸಿನಿಮಾ ಥಿಯೇಟರ್ ಗಳು ಪ್ರೇಕ್ಷಕರಿಗೆ ತೆರೆಯಲಿದೆ.

ಅಲ್ಲದೆ ಜುಲೈ 26 ರಿಂದ ಪದವಿ ಕಾಲೇಜು ಪ್ರಾರಂಭಕ್ಕೆ ತೀರ್ಮಾನಿಸಲಾಗಿದೆ. ಸಿಎಂ ಅಧಿಕೃತ ನಿವಾಸದಲ್ಲಿ ಸಚಿವರು ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿದ ಬಿ.ಎಸ್. ಯಡಿಯೂರಪ್ಪ ರಾಜ್ಯಾದ್ಯಂತ ನೈಟ್​ ಕರ್ಫ್ಯೂ ಅವಧಿಯಲ್ಲಿ ಒಂದು ಗಂಟೆ ಸಡಿಲಗೊಳಿಸಿದ್ದು ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆ ತನಕ‌ ನೈಟ್ ಕರ್ಫ್ಯೂ ಇರಲಿದೆ.

ಸಿನಿಮಾ ಥಿಯೇಟರ್ ಗಳಲ್ಲಿ ಶೇ. 50 ರಷ್ಟು ಸೀಟುಗಳ ಭರ್ತಿಯೊಂದಿಗೆ ಪ್ರೇಕ್ಷಕರು ಸಿನಿಮಾ ವೀಕ್ಷಿಸಲು ಅವಕಾಶ ನೀಡಲಾಗಿದೆ.‌ ಸ್ಯಾನಿಟೈಸರ್, ಮಾಸ್ಕ್ ಬಳಕೆ ಕಡ್ಡಾಯ.

ಇನ್ನು ಪದವಿ ತರಗತಿಗಳನ್ನು ಜುಲೈ 26ರಿಂದ ಪ್ರಾರಂಬಿಸಲು ಆದೇಶಿಸಿದ್ದು ವಿದ್ಯಾರ್ಥಿಗಳು ಕಡ್ಡಾಯವಾಗಿ ಮೊದಲ ಡೋಸ್ ಕೊರೋನಾ ಲಸಿಕೆ ಪಡೆದು ತರಗತಿಗಳಿಗೆ ಹಾಜರಾಗಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

 

Comments are closed.