
(ಸಾಂದರ್ಭಿಕ ಚಿತ್ರ)
ಸುರತ್ಕಲ್: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಪೊಲೀಸರು ಅಲ್ಲಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಅವಧಿ ಮೀರಿ ಸಂಚರಿಸುವ ವಾಹನ ಸವಾರರನ್ನು ತಡೆದು ಫೈನ್ ಹಾಕುತ್ತಿದ್ದು ಇದನ್ನು ತಪ್ಪಿಸಲು ವಾಹನ ಸವಾರರು ಅಡ್ದದಾರಿ ಹಿಡಿದಿದ್ದಾರೆ.
ಸುರತ್ಕಲ್ ಠಾಣಾ ಪೊಲೀಸರು ರೈಲ್ವೇ ಬ್ರಿಡ್ಜ್ ಬಳಿ ಚೆಕ್ ಪೋಸ್ಟ್ ನಿರ್ಮಿಸಿ ಕಾವಲು ಕಾಯುತ್ತಿದ್ದಾರೆ. ಆದರೆ ದ್ವಿಚಕ್ರ, ಕಾರ್ ಸವಾರರು ಇದನ್ನು ತಪ್ಪಿಸುವ ಸಲುವಾಗಿ ಚೊಕ್ಕಬೆಟ್ಟು ಬಳಿ ತಿರುವು ಪಡೆದು ಬಂಟರಭವನ ಸೂರಜ್ ಹೊಟೇಲ್ ರಸ್ತೆಯಾಗಿ ಸಂಚಾರ ನಡೆಸುತ್ತಿದ್ದಾರೆ.
ಹೆಚ್ಚಿನ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್, ಮಾಸ್ಕ್ ಇದಾವುದೂ ಇಲ್ಲದೆ ಬಿಂದಾಸ್ ಸಂಚರಿಸುತ್ತಿದ್ದು ತ್ರಿಬಲ್ ರೈಡ್ ಸಾಮಾನ್ಯವಾಗಿದೆ.
ರೈಲ್ವೇ ಬ್ರಿಡ್ಜ್ ಪಕ್ಕ ಮೆಸ್ಕಾಂ ಹತ್ತಿರ ಪೊಲಿಸರು ವಾಹನ ತಪಾಸಣೆ ನಡೆಸುತ್ತಾರೆ. ಪೊಲಿಸರ ಕಣ್ತಪ್ಪಿಸಿ ದ್ವಿಚಕ್ರ ಸವಾರರು ಚೊಕ್ಕಬೆಟ್ಟು ಅಗರಮೇಲು ಜಾರಂದಾಯ ದೈವಸ್ಥಾನ ರಸ್ತೆಯಾಗಿ ಬಂಟರ ಭವನ ಸೂರಜ್ ಹೊಟೇಲ್ ರಸ್ತೆ ಯಾಗಿ ಹೊಗುತ್ತಾರೆ.
ಅದೇ ರೀತಿ ಸುರತ್ಕಲ್ ನಿಂದ ಕೃಷ್ಣಾಪುರ, ಕಾಟಿಪಳ್ಳ, ಕಾನ ಕಡೆಗೆ ಸಂಚಾರ ನಡೆಸುವವರು ಸೂರಜ್, ಬಂಟರ ಭವನ ಮಾರ್ಗವಾಗಿ ವಾಪಾಸ್ ತೆರಳುತ್ತಾರೆ.
ಇಲ್ಲಿ ದಿನನಿತ್ಯ ವಾಹನಗಳ ದಟ್ಟಣೆ ಹೆಚ್ಚುತ್ತಿದ್ದು ಜನವಸತಿ ಪ್ರದೇಶವಾದ ಕಾರಣ ಮಕ್ಕಳು, ವೃದ್ಧರು ರಸ್ತೆಗಿಳಿಯಲು ಭಯ ಪಡುವಂತಾಗಿದೆ. ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಿದ್ದು ಪೊಲಿಸರು ಚೊಕ್ಕಬೆಟ್ಟು ಬಳಿ ಇಲ್ಲವೇ ಸೂರಜ್ ಸಮೀಪ ತಾತ್ಕಾಲಿಕ ಚೆಕ್ ಪೋಸ್ಟ್ ನಿರ್ಮಿಸಿ ಕಾರ್ಯಚರಣೆ ನಡೆಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
Comments are closed.