ಉಡುಪಿ: ಕರ್ನಾಟಕ ಕರಾವಳಿಯಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಗುರುವಾರವೂ ಗಾಳಿ ಸಹಿತ ಮಳೆ ಮುಂದುವರಿದಿದೆ.

ಉದ್ಯಾವರದ ಕನಕೋಡದಲ್ಲಿ ಗಾಳಿ ಮಳೆ ಸಂದರ್ಭ ಸ್ವಿಚ್‌ಬೋರ್ಡ್ ಪರಿಶೀಲಿಸುತ್ತಿದ್ದ ಮೋಕ್ಷಿತ್ ಕರ್ಕೆರಾ (25) ಎನ್ನುವ ಯುವಕ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾರೆ. ಈ ಘಟನೆ ಜೂನ್ 16 ಬುಧವಾರ ಸಂಜೆ ಸಂಭವಿಸಿದೆ.
ಮೋಕ್ಷಿತ್ ಮಲ್ಪೆ ಕೊಡವೂರು ನಿವಾಸಿಯಾಗಿದ್ದು ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದರು. ಸಮಯ ಸಿಕ್ಕಾಗಲೆಲ್ಲಾ ಅವನು ತನ್ನ ತಾಯಿಯೊಂದಿಗೆ ಮೀನು ಮಾರಾಟದ ವೃತ್ತಿಗೆ ಸಹಾಯ ಮಾಡುತ್ತಿದ್ದರು.
ಮನೋಜ್ ಕರ್ಕೇರಾ ದಂಪತಿಯ ಇಬ್ಬರು ಪುತ್ರರಲ್ಲಿ ಹಿರಿಯರಾದ ಮೋಕ್ಷಿತ್ ಕುಟುಂಬವನ್ನು ಪೋಷಿಸುತ್ತಿದ್ದರು.
Comments are closed.