ಮಡಿಕೇರಿ: ಮಡಿಕೇರಿ ನಗರ ಪೊಲೀಸ್ ಠಾಣಾ ಸರಹದ್ದಿನ ಚೈನ್ ಗೇಟ್ ಬಳಿಯ ಡಿ.ಎಫ್.ಒ. ವಸತಿ ಗೃಹದ ಹತ್ತಿರ ಐವರು ಅಕ್ರಮವಾಗಿ ಗಾಂಜಾ ಖರೀದಿ ವಹಿವಾಟಿನಲ್ಲಿ ತೊಡಗಿರುವ ಬಗ್ಗೆ ಮಾಹಿತಿ ದೊರೆತ ಮೇರೆಗೆ ಮಡಿಕೇರಿ ನಗರ ವೃತ್ತ ನಿರೀಕ್ಷಕ ಪಿ.ವಿ.ವೆಂಕಟೇಶ್ ನೇತೃತ್ವದ ತಂಡ ದಾಳಿ ನಡೆಸಿ 5 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ವಿರಾಜಪೇಟೆ ಮೂಲದ ಮೊಹಮ್ಮದ್ ಅಸ್ಲಾಂ ಕೆ.ಹೆಚ್ (23), ಬೋಪಣ್ಣ ಕೆ.ಕೆ. (22), ನಾಪೊಕ್ಲು ನಿವಾಸಿ ಅಕ್ಷಿತ್ ಸಿ.ಸಿ @ ಚಿಟ್ಟಿಯಪ್ಪ (24), ಮಡಿಕೇರಿಯ ಸುಮಂತ್ @ ಅಣ್ಣು (22), ರಾಜೇಶ (22) ಬಂಧಿತರು. ಆರೋಪಿಗಳಿಂದ 1,26,000 ರೂಪಾಯಿ ಮೌಲ್ಯದ ಮಾದಕ ವಸ್ತುಗಳಾದ 1) 750 ಗ್ರಾಂ. ಗಾಂಜಾ 2)11.970 ಗ್ರಾಂ, 3) 0.8 ಗ್ರಾಂ ಹಾಗೂ 2 ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಕೊಡಗು ಜಿಲ್ಲಾ ಎಸ್ಪಿ ಕ್ಷಮಾಮಿಶ್ರಾ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಯು ಮಡಿಕೇರಿ ಉಪ ವಿಭಾಗದ ಡಿವೈಎಸ್ಪಿ ಬಿ.ಪಿ.ದಿನೇಶ್ ಕುಮಾರ್ ಮತ್ತು ಮಡಿಕೇರಿ ನಗರ ವೃತ್ತ ನಿರೀಕ್ಷಕ ಪಿ.ವಿ.ವೆಂಕಟೇಶ್ ನೇತೃತ್ವದಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣಾ ಉಪ ನಿರೀಕ್ಷಕಿ ಅಂತಿಮ ಎಂ.ಟಿ,, ಅಪರಾಧ ಪತ್ತೆ ಕರ್ತವ್ಯದ ಸಿಬ್ಬಂದಿಗಳಾದ ಕೆ.ಕೆ.ದಿನೇಶ್, ಹೆಚ್.ಎಸ್.ಶ್ರೀನಿವಾಸ, ಪ್ರವೀಣ್ ಬಿ.ಕೆ., ನಾಗರಾಜ್ ಕಡಗಣ್ಣನವರ್, ಅರುಣ್ ಕುಮಾರ್ ಬಿ.ಜಿ, ಸುನೀಲ್ ಬಿ.ಓ., ಧರ್ಮ ಕೆ.ಎಂ, ಶಶಿಕುಮಾರ್, ದಿವ್ಯ ಮತ್ತು ಸೌಮ್ಯರವರು ನಡೆಸಿದ್ದು ಇವರ ಕಾರ್ಯವೈಖರಿಯನ್ನು ಎಸ್ಪಿ ಪ್ರಶಂಸಿಸಿದ್ದಾರೆ.
ಅಕ್ರಮ ಗಾಂಜಾ ಮಾರಾಟ ಮತ್ತು ಬಳಕೆ ಪ್ರಕರಣಗಳನ್ನು ಪತ್ತೆ ಹಚ್ಚಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗ್ಗೆ ಪೊಲೀಸ್ ಅಧಿಕಾರಿ ಗಳಿಗೆ ಸೂಚನೆಗಳನ್ನು ನೀಡಲಾಗಿದ್ದು, ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಲು ಸಾರ್ವಜನಿಕರು ಇಲಾಖೆಗೆ ಸಹಕಾರ ನೀಡಲು ಎಸ್ಪಿ ಕೋರಿದ್ದಾರೆ.
Comments are closed.