ಕರಾವಳಿ

3 ತಿಂಗಳಿನಿಂದ ವೇತನವಾಗಿಲ್ಲವೆಂದು ಉಡುಪಿಯ ತಾಯಿ‌ ಮಕ್ಕಳ ಆಸ್ಪತ್ರೆಯ ವೈದ್ಯರು, ನರ್ಸ್, ಸಿಬ್ಬಂದಿಗಳ ಪ್ರತಿಭಟನೆ

Pinterest LinkedIn Tumblr

ಉಡುಪಿ: ಉಡುಪಿಯ ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿಗಳು ಮೂರು ತಿಂಗಳ ಬಾಕಿ ವೇತನ ಪಾವತಿಗೆ ಆಗ್ರಹಿಸಿ ಪ್ರತಿಭಟನೆ ಮಾಡಿದ್ದಾರೆ.

 

ಕಳೆದ ಮೂರು ತಿಂಗಳಿನಿಂದ ವೇತನ ಪಾವತಿಯಾಗದ ಹಿನ್ನೆಲೆಯಲ್ಲಿ ಆಸ್ಪತ್ರೆ ಸುಮಾರು 200 ಸಿಬ್ಬಂದಿಗಳು ಪ್ರತಿಭಟಿಸಿದ್ದು ವೈದ್ಯರು,ನರ್ಸ್ ಸೇರಿದಂತೆ ಸಿಬ್ಬಂದಿಗಳು ವೇತನ ಪಾವತಿಗೆ ಆಗ್ರಹಿಸುತ್ತಿದ್ದಾರೆ.

ಕಳೆದ ಅಕ್ಟೋಬರ್ ತಿಂಗಳಿಂದ ಪಿಎಫ್ ಕೂಡ ತಡೆದಿಟ್ಟಿದ್ದಾರೆ. ಬಾಕಿ ವೇತನವನ್ನು ಪಾವತಿಸುವ ಬಗ್ಗೆ ಯಾವ ಮಾಹಿತಿಯನ್ನು ನೀಡುತ್ತಿಲ್ಲ. ಕೆಲಸ ಮುಂದುವರೆಸಿ ಎಂದು ಹೇಳುತ್ತಿದ್ದಾರೆ. ವೇತನ ಪಾವತಿಸದಿದ್ದರೆ ಕೆಲಸ ಹೇಗೆ ಮಾಡುವುದು ಎನ್ನುವುದು ನೌಕರರ ಪ್ರಶ್ನೆಯಾಗಿದೆ.

ಪ್ರತಿಭಟನೆಯ ಸುಳಿವು ಇಲ್ಲದೆ ದೂರದಿಂದ ಬಂದ ಗರ್ಭಿಣಿ ಮಹಿಳೆಯರು ವೈದರಿಲ್ಲದೆ ಪರದಾಟ ನಡೆಸಿದರು. ಮುಂಜಾನೆಯಿಂದ ಯಾವುದೇ ಚಿಕಿತ್ಸೆಯೂ ಇಲ್ಲದೆ, ಯಾವುದೇ ಪ್ರತಿಕ್ರಿಯೆವೂ ಸಿಗದೆ ಗರ್ಭಿಣಿಯರು ಕಾಯುತ್ತಾ ಕೂತ ದೃಶ್ಯ ಕಂಡುಬಂತು.

 

Comments are closed.