ಕರಾವಳಿ

ಖ್ಯಾತ ತಬಲ ಕಲಾವಿದ ಸುರೇಶ್ ದಂಪತಿಗಳು ಆತ್ಮಹತ್ಯೆಗೆ ಶರಣು: ಆರ್ಥಿಕ ಮುಗ್ಗಟ್ಟು ಶಂಕೆ?

Pinterest LinkedIn Tumblr

ಮಂಗಳೂರು.ಜೂನ್. 09 : ದಂಪತಿಗಳಿಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಕದ್ರಿ ಪಿಂಟೋಸ್ ಲೇನ್ ಸಮೀಪ ಇಂದು ಮುಂಜಾನೆ ನಡೆದಿದೆ.

ಖ್ಯಾತ ತಬಲ ಕಲಾವಿದ ಸುರೇಶ್ (52) ಹಾಗೂ ಅವರ ಪತ್ನಿ ವಾಣಿ ಆತ್ಮಹತ್ಯೆಗೆ ಶರಣಾದ ದಂಪತಿಗಳು. ಸುರೇಶ್ ಅವರು ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದರೆ, ಅವರ ಪತ್ನಿ ವಾಣಿ ಮನೆಯೊಳಗೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಾಣಿ ಅವರು ಖಾಸಗಿ ಕಾಲೇಜೊಂದರಲ್ಲಿ ಕರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಆರ್ಥಿಕ ಮುಗ್ಗಟ್ಟಿನಿಂದ ದಂಪತಿಗಳು ಈ ನಿರ್ಧಾರಕ್ಕೆ ಬಂದಿರಬಹುದು ಎಂದು ಶಂಕಿಸಲಾಗಿದೆ..

ಮೃತರು ಓರ್ವ ಮಗನನ್ನು ಅಗಲಿದ್ದಾರೆ. ಸ್ಥಳಕ್ಕೆ ಕದ್ರಿ ಪೋಲಿಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

Comments are closed.