ಕರಾವಳಿ

ವಾರ್ಷಿಕ ಹಬ್ಬದ ಸಂಭ್ರಮದಲ್ಲಿ ಸಂತ ಆಂತೋನಿ ಆಶ್ರಮ ಜೆಪ್ಪು : ಆರನೇ ದಿನದ ನೊವೇನ ಪ್ರಾರ್ಥನೆ

Pinterest LinkedIn Tumblr

ಮಂಗಳೂರು : ಜೆಪ್ಪು ಸಂತ ಜೋಸೆಫ್ ವರ್ಕ್‌ಶಾಪ್ ಇಲ್ಲಿಯ ಸಹಾಯಕ ಪ್ರಭಂಧಕರಾದ ವಂ. ಫಾ. ಸ್ಟ್ಯಾನಿ ಪಿಂಟೊರವರು ಜೆಪ್ಪು ಸಂತ ಆಂತೋನಿ ಆಶ್ರಮದಲ್ಲಿ ಸಂತ ಆಂತೋನಿಯವರ ವಾರ್ಷಿಕ ಹಬ್ಬಕ್ಕೆ ತಯಾರಿಯಾಗಿ ನೊವೇನ ಪ್ರಾರ್ಥನೆಯ ಆರನೇ ದಿನದಂದು ಬಲಿಪೂಜೆ ಅರ್ಪಿಸಿ ಪ್ರವಚನ ಮಾಡಿದರು.

ಈ ದಿನದ ವಿಷಯ: ವ್ಯಾಧಿಸ್ಥರಿಗಾಗಿ ಪ್ರಾರ್ಥಿಸುವುದು. ದೇವರ ಕುಮಾರ ಯೇಸು ಸ್ವಾಮಿ ಮನುಷ್ಯರಾಗಿ ಈ ಭೂಲೋಕಕ್ಕೆ ಬಂದಾಗ ಆನೇಕ ರೋಗಿಗಳನ್ನು ಗುಣಪಡಿಸಿದ್ದರು. ಸಂತ ಆಂತೋನಿಯವರು ಹದಿಮೂರನೇ ಶತಮಾನದಲ್ಲಿ ಯುರೋಪ್ ಖಂಡದಲ್ಲಿ ಯೇಸುವಿನ ನಾಮದಲ್ಲಿ ಎಷ್ಟೋ ಜನರನ್ನು ರೋಗದಿಂದ ವಾಸಿ ಮಾಡಿದ್ದರು.

ಇವತ್ತು ಪ್ರಪಂಚ ಕೋವಿಡ್ ಕಾಯಿಲೆಯಿಂದ ತತ್ತರಿಸಿ ಹೋಗಿದೆ. ಇವರಿಗಾಗಿ ಮತ್ತು ಇತರ ಕಾಯಿಲೆಯಿಂದ ನರಳುತ್ತಿರುವರಿಗಾಗಿ ಸಂತ ಆಂತೋನಿಯವರು ದೇವರಲ್ಲಿ ಕೋರಿ ಜನರನ್ನು ಕಾಯಿಲೆಯಿಂದ ಗುಣಪಡಿಸಲೆಂದು ಪ್ರಾರ್ಥಿಸುವ ಎಂದು ಫಾ. ಪಿಂಟೊರವರು ಭಕ್ತಾಧಿಗಳಿಗೆ ಕರೆ ನೀಡಿದರು.

ಸಂಸ್ಥೆಯ ಸಹಾಯಕ ನಿರ್ದೇಶಕ ಫಾ. ರೋಶನ್ ಡಿ’ಸೋಜರವರು ನೊವೇನ ಪ್ರಾರ್ಥನೆ ನಡೆಸಿಕೊಟ್ಟರು.

Comments are closed.