
ಮಂಗಳೂರು, ಜೂನ್.08 : ಕೋವಿಡ್- 19 ವಿರುದ್ಧ ಕೇಂದ್ರ ಸರಕಾರದ ಸಂಶೋಧಿತ ಉತ್ಪನ್ನ ಆಯುಷ್ ಇಲಾಖೆಯ ಪ್ರಮಾಣೀಕೃತ ಸಿಸಿಆರ್ ಎಎಸ್ ಅಭಿವೃದ್ಧಿಗೊಳಿಸಿದ ಆಯುರ್ವೇದಿಕ್ ಉತ್ಪನ್ನ ಆಯುಷ್ 64 ಔಷಧಿಯನ್ನು ಜೂನ್ 7 ರಂದು ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಅಟಲ್ ಸೇವಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾದ ಸರಳ ಕಾರ್ಯಕ್ರಮದಲ್ಲಿ ರಾಜ್ಯದ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿಯಿತು.
‘ಆಯುಷ್ 64’ ಉತ್ಪನ್ನವನ್ನು ತಯಾರಿಸುವ ಪರವಾನಗಿ ಹೊಂದಿರುವ ಪುತ್ತೂರಿನ ಎಸ್‌ಡಿಪಿ ರೆಮಿಡಿಸ್ ಮತ್ತು ರಿಸರ್ಚ್ ಸೆಂಟರ್‌ನ ಮುಖ್ಯಸ್ಥ, ಆಯುರ್ವೇದ ತಜ್ಞ ಡಾ. ಹರಿಕೃಷ್ಣ ಪಾಣಾಜೆ ಮತ್ತು ರಾಜ್ಯಾದ್ಯಂತ ವಿತರಿಸುವ ಮಾರುಕಟ್ಟೆ ಹೊಣೆ ಹೊತ್ತಿರುವ ವಿವೇಕ್ ಟ್ರೇಡರ್ಸ್ ಹಾಗೂ ಆಯುರ್ ವಿವೇಕ್ ಸಂಸ್ಥೆಯ ಮುಖ್ಯಸ್ಥರಾದ ಮಂಗಲ್ಪಾಾಡಿ ನರೇಶ್ ಶೆಣೈ ಅವರು ಆಯುಷ್ 64 ಔಷಧಿಯನ್ನು ಬಿಡುಗಡೆಗೊಳಿಸಿದರು.

‘ಕೋವಿಡ್-19’ ವಿರುದ್ಧ ಹೋರಾಡುವ ಆಯುರ್ವೇದ ಸಂಜೀವಿನಿ, ಕೇಂದ್ರ ಆಯುಷ್ ಇಲಾಖೆಯಿಂದ ಪ್ರಮಾಣೀಕೃತ ‘ಆಯುಷ್ 64’ ಈ ಮೂಲಕ ಕೊರೋನಾ ಸೋಂಕಿತರ ಪಾಲಿಗೆ ‘ಆಯುಷ್ 64’ ಹೊಸ ಭರವಸೆ ಮೂಡಿಸಿದೆ.
ಬಿಡುಗಡೆ ಕಾರ್ಯಕ್ರಮದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಔಷಧಿ ಬಗ್ಗೆ ಮಾಹಿತಿ ನೀಡಿದ ಡಾ.ಹರಿಕೃಷ್ಣ ಪಾಣಾಜೆ ಅವರು, ಎಸ್‌ಡಿಪಿ ಸಂಸ್ಥೆಯು ಕಳೆದ 30 ವರ್ಷಗಳಿಂದ ಆಯುರ್ವೇದ ಉತ್ಪನ್ನಗಳನ್ನು ತಯಾರಿಸುತ್ತ ಬಂದಿದೆ.
ಭಾರತ ಸರ್ಕಾರದ ಆಯುಷ್ ಇಲಾಖೆ ಹಾಗೂ ಸೆಂಟ್ರಲ್ ಕೌನ್ಸಿಲ್ ಆಫ್ ರಿಸರ್ಚ್ ಇನ್ ಆಯುರ್ವೇದ ‘ಆಯುಷ್ 64’ ಔಷಧಿಯನ್ನು ಸಿದ್ಧಪಡಿಸಿದೆ. ಇದರ ಬಗ್ಗೆ ದೇಶದ 9 ಕಡೆಗಳಲ್ಲಿ ಕ್ಲಿನಿಕಲ್ ಅಧ್ಯಯನ ಪ್ರಯೋಗಗಳು ನಡೆದಿದ್ದು, ಕೊರೋನಾ ಸೋಂಕನ್ನು ಯಶಸ್ವಿಯಾಗಿ ಈ ಔಷಧಿ ನಿರ್ಮೂಲನೆ ಮಾಡಲಿದೆ ಎಂಬುದನ್ನು ಸಾರಿವೆ.
ರಾಜ್ಯದಲ್ಲಿ ಈ ಔಷಧಿ ತಯಾರಿಕೆಯ ಪರವಾನಗಿ ಎಸ್‌ಡಿಪಿ ರೆಮಿಡಿಸ್ ಮತ್ತು ರಿಸರ್ಚ್ ಸೆಂಟರ್‌ಗೆ ದೊರೆತಿರುವುದು ಸಂತಸದ ವಿಚಾರವಾಗಿದ್ದು, ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸಂಸ್ಥೆ ಸಂಪೂರ್ಣ ಸಿದ್ಧವಾಗಿದೆ ಎಂದು ಹೇಳಿದರು.

ಯಾವಾಗ ಸೇವಿಸ ಬೇಕು?
ಕೊರೋನಾ ಲಕ್ಷಣಗಳು ಆರಂಭವಾದ ಕೂಡಲೆ ಈ ಔಷಧಿ ಸೇವನೆ ಆರಂಭಿಸಬೇಕು. ಮಾತ್ರೆ ಸೇವನೆಯ ವಾರದೊಳಗೆ ಸೋಂಕಿನ ಲಕ್ಷಣಗಳು ಶಮನಗೊಳ್ಳುತ್ತವೆ. ದೇಹದಲ್ಲಿ ‘ವೈರಸ್ ಲೋಡ್’ ಕಡಿಮೆ ಮಾಡಿ ರೋಗಿಯನ್ನು ಗುಣಮುಖಗೊಳಿಸಲಿದೆ. ಕೊರೋನಾ ಲಕ್ಷಣ ಕಂಡು ಬಂದು ವರದಿ ದೊರೆಯಲು ವಿಳಂಬವಾದರೂ ಈ ಔಷಧಿಯ ಸೇವನೆ ಆರಂಭಿಸಬಹುದು.
ಅಡ್ಡ ಪರಿಣಾಮ ಇಲ್ಲ!
ಈ ಔಷಧಿ ಇತರ ಸೋಂಕು ರೋಗಗಳ ಶಮನಕ್ಕೂ ಪೂರಕವಾಗಿರುವುದರಿಂದ ಯಾವುದೇ ಸಮಸೈಯಿಲ್ಲ. ಅಡ್ಡ ಪರಿಣಾಮವಂತೂ ಇಲ್ಲವೇ ಇಲ್ಲ. ಈ ಔಷಧಿ ಸೇವನೆಯಿಂದ ಸೋಂಕಿತ ರೋಗಿಯ ಆರೋಗ್ಯ ಸ್ಥಿತಿ ವೆಂಟಿಲೇಟರ್‌ವರೆಗೆ ಹೋಗದಂತೆ ತಡೆದು ಗುಣಮುಖಗೊಳಿಸುತ್ತದೆ ಎಂದು ಡಾ.ಹರಿಕೃಷ್ಣ ಪಾಣಾಜೆ ತಿಳಿಸಿದರು.

ಔಷಧಿ ಸೇವನೆ ಕ್ರಮ ಹೇಗೆ? ಎಷ್ಟು ದಿನ ಸೇವಿಸ ಬೇಕು?
ಆಯುಷ್ 64 ಔಷಧಿಯನ್ನು ಕೊರೋನಾ ಸೋಂಕಿತರು 14 ದಿನಗಳವರೆಗೆ ತೆಗೆದುಕೊಳ್ಳಬೇಕಾಗುತ್ತದೆ. ಕೋವಿಡ್-19 ಸಾಮಾನ್ಯ ಲಕ್ಷಣಗಳಿರುವ ಸೋಂಕಿತರು ಬೆಳಗ್ಗೆ ಮಧ್ಯಾಾಹ್ನ, ರಾತ್ರಿ ತಲಾ 1 ಮಾತ್ರೆಯಂತೆ ಆಹಾರ ಸೇವಿಸಿದ ಒಂದು ಗಂಟೆ ನಂತರ ನೀರಿನೊಂದಿಗೆ ಸೇವಿಸಬೇಕು.
ಹೀಗೆ 20 ದಿನ ಸೇವನೆ ಮಾಡಿದರೆ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಬಹುದು. ಸಕ್ಕರೆ ಕಾಯಿಲೆ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳ ಔಷಧಗಳೊಂದಿಗೆ ಆಯುಷ್ 64 ಮಾತ್ರೆಗಳನ್ನು ಸೇವಿಸಬಹುದು. ಕೋವಿಡ್ ಲಸಿಕೆ ಪಡೆದು ಸೋಂಕಿತರಾದವರು ಕೂಡ ವೈದ್ಯರ ಸಲಹೆ ಮೇರೆಗೆ ಪಡೆದುಕೊಳ್ಳಬಹುದು ಎಂದು ಅವರು ವಿವರ ನೀಡಿದರು.
ಶೀಘ್ರದಲ್ಲಿ ಕೋವಿಡ್ ಮುಕ್ತ ಭಾರತ ನಿರ್ಮಾಣ : ನರೇಶ್ ಶೆಣೈ

‘ಆಯುಷ್ 64’ ಔಷಧ ಉತ್ಪಾಾದನೆಗೆ ಇಡೀ ದೇಶದಲ್ಲಿ ಕೇವಲ 9 ಸಂಸ್ಥೆಗಳಿಗೆ ಮಾತ್ರ ಸರ್ಕಾರ ಪರವಾನಗಿ ನೀಡಿದ್ದು, ರಾಜ್ಯದಲ್ಲಿ ಈ ಉತ್ಪನ್ನ ತಯಾರಿಸುವ ಏಕೈಕ ಸಂಸ್ಥೆ ಪುತ್ತೂರಿನ ಎಸ್‌ಡಿಪಿ ಆಗಿದೆ.
ಇನ್ನು ಮುಂದೆ ಈ ಔಷಧಿ ರಾಜ್ಯದ ಎಲ್ಲ ಔಷಧಿ ಮಳಿಗೆಗಳಲ್ಲಿ ದೊರೆಯಲಿದೆ. ಅತಿ ಶೀಘ್ರದಲ್ಲಿ ಕೋವಿಡ್ ಮುಕ್ತ ಭಾರತ ನಿರ್ಮಾಣವಾಗಲಿದೆ ಎಂದು ವಿವೇಕ್ ಟ್ರೇಡರ್ಸ್ ಹಾಗೂ ಆಯುರ್ ವಿವೇಕ್ ಸಂಸ್ಥೆಯ ಮುಖ್ಯಸ್ಥರಾದ ನರೇಶ್ ಶೆಣೈ ಹೇಳಿದರು.
Comments are closed.