ಕರಾವಳಿ

ಪ್ರಶಸ್ತಿ ವಿಜೇತ ಕ್ರೀಡಾ ಪಟು ಉದಯ ಶೆಟ್ಟಿ ಪರಿವಾರದವರಿಂದ ಜನ ಸಾಮಾನ್ಯರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

Pinterest LinkedIn Tumblr

ಮುಂಬಯಿ : ಛತ್ರಪತಿ ಶಿವಾಜಿ ಮಹಾರಾಜ ಪ್ರಶಸ್ತಿ ವಿಜೇತ ವೈಟ್ ಲಿಪ್ಟರ್ ಉದಯ ಶೆಟ್ಟಿ ಮತ್ತು ಅವರ ಧರ್ಮ ಪತ್ನಿ ವೀಣಾ ಶೆಟ್ಟಿಯವರು ಕಳೆದ ಒಂದು ವಾರದಿಂದ ಅಂಧೇರಿ ಪಶ್ಚಿಮ, ಜೋಗೇಶ್ವರಿ ಹಾಗೂ ಬೊರಿವಲಿ ಪರಿಸರದಲ್ಲಿ ಲಾಕ್ ಡೌನ್ ನಿಂದಾಗಿ ಸಂಕಷ್ಟಗೊಳಗಾದ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸುವ ಕಾರ್ಯದಲ್ಲಿ ತೊಡಗಿ ಮಾನವೀಯತೆಯನ್ನು ಮೆರೆದಿದ್ದಾರೆ.

ಕಳೆದ ವರ್ಷ ಬೆಂಗಳೂರಿನಲ್ಲಿ ಉದಯ ಶೆಟ್ಟಿಯವರ ತಂದೆಯವರಾದ ಸದಾಶಿವ ಎನ್. ಶೆಟ್ಟಿ ಹಾಗೂ ಮುಂಬಯಿಯಲ್ಲಿ ಅವರ ಅತ್ತೆ ಇಂದಿರಾ ಶೆಟ್ಟಿ ಯವರು ವೃದ್ದಾಪ್ಯದಿಂದಾಗಿ ನಿಧನ ರಾಗಿದ್ದು ಅವರಿಬ್ಬರ ಸ್ಮರಣಾರ್ಥ ಉದಯ ಶೆಟ್ಟಿ ದಂಪತಿಯವರು ತನ್ನ ಸ್ವಂತ ಖರ್ಚಿನಿಂದ ಈಗಾಗಲೇ ಸುಮಾರು 300 ಕುಟುಂಬಗಳಿಗೆ ಒಂದು ತಿಂಗಳಿಗೆ ಬೇಕಾದ ಅಕ್ಕಿ ಹಾಗೂ ಇತರ ದವಸ ಧಾನ್ಯಗಳನ್ನು ಅವರ ಮನೆಗೆ ಬೇಟಿಯಿತ್ತು ವಿತರಿಸಿದರು. ಅಲ್ಲದೆ ಈ ಕಾರ್ಯವನ್ನು ಇನ್ನೂ ಮುಂದುವರಿಸುದಾಗಿ ಅವರು ತಿಳಿಸಿದ್ದಾರೆ.

ಖ್ಯಾತ ಕ್ರೀಡಾಪಟು ಉದಯ ಶೆಟ್ಟಿಯವರು ರಾಷ್ಟ್ರೀಯ ಮಟ್ಟದ ಚಾಂಪಿನ ಆಗಿದ್ದು, ಮಾಷ್ಟರ್ ವೈಟ್ ಲಿಪ್ಟಿಂಗ್ ಫೆಡರೇಶನ್ ನ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ರಾಷ್ಟೀಕೃತ ಬ್ಯಾಂಕೊಂದರಲ್ಲಿ ಉದ್ಯೋಗದಲ್ಲಿದ್ದ ಸಂದರ್ಭದಲ್ಲಿ ಅನೇಕ ತುಳು ಕನ್ನಡಿಗರಿಗೆ ಬ್ಯಾಂಕಿನಲ್ಲಿ ನೌಕರಿಯನ್ನು ಒದಗಿಸಿದ್ದು ಜನ ಸೇವೆಯನ್ನು ಮಾಡುತ್ತಾ ಸ್ವಯಂ ನಿವೃತ್ತಿ ಹೊಂದಿ ಸ್ವಂತ ಹೋಟೇಲು ಉದ್ಯಮವನ್ನು ನಡೆಸುತ್ತಿದ್ದಾರೆ. ವರದಿ : ಈಶ್ವರ ಎಂ. ಐಲ್ / ಚಿತ್ರ : ದಿನೇಶ್ ಕುಲಾಲ್

Comments are closed.