
ಮಂಗಳೂರು, ಜೂನ್ 06: ಜಿಲ್ಲೆಯ ಪ್ರಪ್ರಥಮ ಆಮ್ಲಜನಕ ತಯಾರಿಕಾ ಘಟಕವನ್ನು ಬಂಟ್ವಾಳ ತಾಲೂಕಿನ ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಲೋಕಾರ್ಪಣೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಸಂಸದ ನಳೀನ್ ಕುಮಾರ್ ಕಟೀಲ್, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ವೈದ್ಯಕೀಯ ಸಿಬ್ಬಂದಿಗಳು ಹಾಗೂ ಮತ್ತಿತರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಚಿವರು ಮಾತನಾಡಿ ವಾಮದಪದವು ಸಮುದಾಯ ಆರೋಗ್ಯ ಕೇಂದ್ರವು 30 ಹಾಸಿಗೆಗಳ ಸಾಮಥ್ರ್ಯವುಳ್ಳ ಆಸ್ಪತ್ರೆಯಾಗಿದ್ದು, ಸದ್ರಿ ಆಮ್ಲಜನಕ ತಯಾರಿಕಾ ಘಟಕವನ್ನು ಅಮ್ರೀಕೇರ್ ಇಂಡಿಯಾ ಪೌಂಡೇಶನ್ ಇಂಡಿಯಾ, ಮಹಾರಾಷ್ಟ್ರ(Americares India Foundation, Maharashtra) ಇವರು ಕೊಡುಗೆಯಾಗಿ ನೀಡಿರುತ್ತಾರೆ.
ಈ ಆಮ್ಲಜನಕ ಘಟಕವು 500 ಲೀ. ಸಾಮಥ್ರ್ಯ ಹೊಂದಿದ್ದು, ಪ್ರತೀ ನಿಮಿಷಕ್ಕೆ 47LPM ಆಮ್ಲಜನಕ ತಯಾರಿಕಾ ಸಾಮಥ್ರ್ಯ ಹೊಂದಿರುತ್ತದೆ. ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಸ್ತುತ ಅಗತ್ಯವಿರುವ ಆಮ್ಲಜನಕದ ಬೇಡಿಕೆಯನ್ನು ಪೂರೈಸಲು ಇದು ಸಶಕ್ತವಾಗಿದೆ ಎಂದರು.
Comments are closed.