ಕರಾವಳಿ

ಕಾರು ಹತ್ತಿಸಿ ಕೊಲೆಗೈದ ಯಡಮೊಗೆ ಗ್ರಾಮಪಂಚಾಯತ್ ಅಧ್ಯಕ್ಷನ‌ ಬಂಧನ

Pinterest LinkedIn Tumblr

ಕುಂದಾಪುರ: ಯಡಮೊಗೆಯಲ್ಲಿ ಕಾರು ಹತ್ತಿಸಿ ಕೊಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಆರೋಪಿ ಗ್ರಾಮಪಂಚಾಯತ್ ಅಧ್ಯಕ್ಷನನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.

ಶನಿವಾರ ರಾತ್ರಿ ಸಾಮಾಜಿಕ‌ ಕಾರ್ಯಕರ್ತ ಉದಯ್ ಗಾಣಿಗ (45) ಎಂಬವರ ಮೇಲೆ ಅವರ ಮನೆ ಎದುರಿನ‌ ರಸ್ತೆಯಲ್ಲೇ ಕಾರು ಹರಿಸಿ ಕೊಲೆ ಮಾಡಲಾಗಿತ್ತು. ಉದಯ್ ಪತ್ನಿ ಕೊಟ್ಟ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ‌ ಶಂಕರನಾರಾಯಣ ಪೊಲೀಸರು ತಡರಾತ್ರಿ ಕಾರ್ಯಾಚರಣೆ ನಡೆಸಿ ಕ್ಷಿಪ್ರಗತಿಯಲ್ಲಿ ಆರೋಪಿ ಪ್ರಾಣೇಶ್ ಯಡಿಯಾಳ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿ ಪೊಲೀಸ್ ವಶದಲ್ಲಿದ್ದು ತನಿಖೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಯಾವ ಕಾರಣಕ್ಕೆ ಕೊಲೆಗೈಯ್ಯಲಾಗಿದೆ ಎಂಬಿತ್ಯಾದಿ ಅಂಶಗಳು ಪೊಲೀಸ್‌ ತನಿಖೆ ಇಂದಷ್ಟೇ ಬೆಳಕಿಗೆ ಬರಬೇಕಿದೆ.

ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಯಡಿಯಾಳ ಹಾಗೂ ಉದಯ್ ಮಧ್ಯೆ ಕೊಳವೆ ಬಾವಿಗೆ ಸಂಬಂಧಿಸಿ ಎನ್ಓಸಿ ವಿಚಾರದಲ್ಲಿ ಗಲಾಟೆ ನಡೆದಿತ್ತು. ಸಾಕಷ್ಟು ಕಿರಿಕಿರಿ ಮಾಡಿ ಎನ್ಓಸಿ ಕೊಡಲಾಗಿತ್ತು. ಆ ಬಳಿಕ ಪ್ರಾಣೇಶ್ ಯಡಿಯಾಳ ಹಾಗೂ ಬಾಲಚಂದ್ರ ಭಟ್ ಜೊತೆಗೂಡಿ ಉದಯ್ ಅವರೊಂದಿಗೆ ಗಲಾಟೆ ನಡೆಸಿ ಬೆದರಿಕೆ ಹಾಕಿದ್ದರು ಎಂದು ಅವರ ಪತ್ನಿ ದೂರಿನಲ್ಲಿ ವಿವರಿಸಿದ್ದಾರೆ.

Comments are closed.