
ಮಂಗಳೂರು : ನಗರದ ಎಕ್ಕೂರುನಲ್ಲಿರುವ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಎಂಪಿಡಬ್ಲ್ಯೂ /ಆಶಾ ಕಾರ್ಯಕರ್ತೆಯರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ಮಾಜಿ ಶಾಸಕರಾದ ಜೆ. ಆರ್. ಲೋಬೊರವರು ವಿತರಿಸಿದರು.

ಅವರು ಈ ಸಂದರ್ಭದಲ್ಲಿ ಮಾತನಾಡುತ್ತಾ, ಕೋವಿಡ್ ರೋಗದ ಸಮಯದಲ್ಲಿ ಆಶಾ ಕಾರ್ಯಕರ್ತೆಯರು ಮಾಡುತ್ತಿರುವ ಸೇವೆ ಅನನ್ಯವಾದುದು. ನಗರದ ಕೆಲವೊಂದು ಕಡೆ ಅವರಿಗೆ ಕೋವಿಡ್ ರೋಗ ತಗುಲಿದ್ದು ಇದೆ. ಪ್ರಸ್ತುತ ಅವರು ಕಷ್ಟದಲ್ಲಿದ್ದರೂ ಕೂಡ ದಿನಾ ಅವರವರ ಕೆಲಸ ಮಾಡುತ್ತಿರುತ್ತಾರೆ. ಅವರ ಗುರುತರವಾದ ಸೇವೆಗೆ ಎಲ್ಲರೂ ಅಭಾರಿಯಾಗಿದ್ದಾರೆ. ಸಮಾಜವು ಅವರಿಗೆ ಋಣಿಯಾಗಿರುತ್ತದೆ ಎಂದರು.

ಕಾರ್ಪೊರೇಟರ್ ಗಳಾದ ಪ್ರವೀಣ್ ಚಂದ್ರ ಆಳ್ವ, ಜೆಸಿಂತಾ ವಿಜಯ್ ಆಲ್ಫ್ರೆಡ್, ಅಶ್ರಫ್ ಬಜಾಲ್, ಅರೋಗ್ಯ ಕೇಂದ್ರದ ವೈದ್ಯರಾದ ಡಾ. ರೆಹನಾ, ಡಾ. ಸೌಜನ್ಯ, ನೋಡಲ್ ಅಧಿಕಾರಿಗಳಾದ ಭವಾನಿ ಶಂಕರ್, ಪ್ರೇಮ್ ಹಾಗೂ ಪಕ್ಷದ ಪ್ರಮುಖರಾದ ಪ್ರಭಾಕರ ಶ್ರೀಯಾನ್, ಟಿ. ಕೆ. ಸುಧೀರ್, ಉಮೇಶ್ ದೇವಾಡಿಗ, ನೀರಜ್ ಪಾಲ್, ಕೃತಿನ್ ಕುಮಾರ್, ಶಶಿಧರ್ ಕೊಟ್ಟಾರಿ, ಹರ್ಬಟ್ ಡಿಸೋಜಾ, ರಫೀಕ್ ಕಣ್ಣೂರ್, ನವೀನ್ ಲೋಬೊ, ವಿಲ್ಫ್ರೆಡ್, ಚಂದ್ರಕಲಾ ಮೊದಲಾದವರು ಉಪಸ್ಥಿತರಿದ್ದರು.
Comments are closed.