ಕರಾವಳಿ

ಮಾಜಿ ಶಾಸಕ ಲೋಬೊರಿಂದ ಬಿಜೈ ಅರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರಿಗೆ ದಿನಸಿ ಕಿಟ್ ವಿತರಣೆ

Pinterest LinkedIn Tumblr

ಮಂಗಳೂರು : ನಗರದ ಬಿಜೈಯಲ್ಲಿರುವ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ  ಎಂಪಿಡಬ್ಲ್ಯೂ / ಆಶಾ ಕಾರ್ಯಕರ್ತೆಯರಿಗೆ ಮಾಜಿ ಶಾಸಕರು ಹಾಗೂ ಜಿಲ್ಲಾ ಕಾಂಗ್ರೆಸ್ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರಾದ ಜೆ. ಆರ್. ಲೋಬೊ ರವರು ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ, ಆಶಾ ಕಾರ್ಯಕರ್ತೆಯರಿಗೆ ಕಳೆದ ಎರಡು ತಿಂಗಳುಗಳಿಂದ ಸರಕಾರ ಸಂಬಳ ಕೊಡುತ್ತಿಲ್ಲ. ಅವರು ಜೀವನ ಸಾಗಿಸಲು ಕಷ್ಟದಲ್ಲಿರುವ ಸಂದರ್ಭದಲ್ಲಿಯೂ ಕೂಡ ಕೋವಿಡ್ ಸೋಂಕಿತರ ಮನೆಗಳಿಗೆ ತೆರಳಿ ಬೇಕಾದ ಔಷದಿ ಹಾಗೂ ಇನ್ನಿತರ ಮಾಹಿತಿಗಳನ್ನು ಒದಗಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.

ಕೆಲವೊಂದು ಕಡೆ ಆಶಾ ಕಾರ್ಯಕರ್ತೆಯರು ಮತ್ತು ದಾದಿಯರಿಗೆ ಸೋಂಕು ತಗುಲಿದ್ದು ನಾವು ಕಂಡಿದ್ದೇವೆ. ಈ ಒಂದು ಕೋವಿಡ್ ಸಂದಿಗ್ದದಲ್ಲಿ ಅವರಿಗೆ ತಮ್ಮ ಮನೆಯವರೊಂದಿಗೆ ಬೆರೆತು ಬಾಳಲು ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಅವರಿಗೆ ಸಹಾಯ ಮಾಡುವುದು ನಮ್ಮ ಧರ್ಮ ಎಂದರು.

ಮಾಜಿ ಮೇಯರ್ ಹಾಗೂ ಕಾರ್ಪೊರೇಟರ್ ಶಶಿಧರ್ ಹೆಗ್ಡೆ, ನವೀನ್ ಡಿಸೋಜಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಪ್ರಮುಖರಾದ ವಿಶ್ವಾಸ್ ಕುಮಾರ್ ದಾಸ್, ಟಿ. ಕೆ. ಸುಧೀರ್, ನೀರಜ್ ಚಂದ್ರ ಪಾಲ್, ಅಲಿಸ್ಟರ್, ಚೇತನ್ ಪೂಜಾರಿ, ರಮಾನಂದ್ ಪೂಜಾರಿ, ಉದಯ್ ಕುಂದರ್, ರಘುರಾಜ್ ಕದ್ರಿ , ಯಶ್ವಾಂಥ್ ಪ್ರಭು, ಯೋಗೇಶ್ ನಾಯಕ್, ಲಿಯಾಖತ್ ಶಾ, ಆಸೀಫ್ ಜೆಪ್ಪು, ರೋಷನ್, ಸವಾನ್ ಜೆಪ್ಪು, ಶಾನ್ ಡಿಸೋಜಾ ಇರ್ವಿನ್, ಆಸ್ಟನ್ ಮೊದಲಾದವರು ಉಪಸ್ಥಿತರಿದ್ದರು.

Comments are closed.