
ಮಂಗಳೂರು, ಮೇ 22 : ನಗರದ ಬಂದರ್ ನಲ್ಲಿರುವ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿರುವ ಎಲ್ಲಾ ಎಂಪಿಡಬ್ಲ್ಯೂ /ಆಶಾ ಕಾರ್ಯಕರ್ತೆಯರು ಮತ್ತು ಸಿಬ್ಬಂದಿಯವರಿಗೆ ಇಂದು ತಾ 22.5.2021ರಂದು ದಿನಸಿ ಸಾಮಗ್ರಿಗಳ ಕಿಟ್ ಗಳನ್ನು ಮಾಜಿ ಶಾಸಕರು ಹಾಗೂ ಜಿಲ್ಲಾ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರಾದ ಜೆ. ಆರ್. ಲೋಬೊ ರವರು ವಿತರಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ,ಇಂದಿನ ಕೋವಿಡ್ 2ನೇ ಅಲೆಯಲ್ಲಿ ದೇಶದಲ್ಲಿ ನೂರಾರು ವೈದ್ಯರು ಹಾಗೂ ವೈದ್ಯಕೀಯ ಕೆಲಸದಲ್ಲಿ ತೊಡಗಿರುವ ದಾದಿಯರು, ಸಿಬ್ಬಂದಿಗಳು ಅಸುನೀಗಿದ್ದಾರೆ. ಈತನ್ಮದ್ಯೆ ಆಶಾ ಕಾರ್ಯಕರ್ತೆಯರು ಹಾಗೂ ಎಂಪಿಡಬ್ಲ್ಯೂ ಕಾರ್ಯಕರ್ತೆಯರು ಕೋವಿಡ್ ಸೋಂಕಿತರ ಮನೆಗಳಿಗೆ ತೆರಳಿ ಕೆಲಸ ಮಾಡುತ್ತಿರುವುದು ಅವಿಸ್ಮರಣೀಯ.
ತಮ್ಮ ಜೀವವನ್ನೇ ಬದಿಗೊತ್ತಿ ಅವರು ತಮ್ಮ ದೈನಂದಿನ ಕೆಲಸ ಮಾಡುತ್ತಿರುತ್ತಾರೆ. ಮನೆಯಲ್ಲಿ ತಮ್ಮ ಕುಟುಂಬದವರೊಂದಿಗೆ ಬೆರೆತು ಬಾಳುವ ಪರಿಸ್ಥಿತಿ ಅವರಿಗೀಗ ಇಲ್ಲವಾಗಿದೆ. ಇಡೀ ಸಮಾಜವೇ ಅವರಿಗೆ ಋಣಿಯಾಗಿದೆ ಎಂದರು.

ಕಾರ್ಪೊರೇಟರ್ ಗಳಾದ ಅಬ್ದುಲ್ ಲತೀಫ್, ಝೀನತ್ ಶಂಶುದ್ದೀನ್, ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಂದ್ರಪ್ರಭಾ, ನೋಡಲ್ ಅಧಿಕಾರಿ ಮಂಜುನಾಥ್ ಸ್ವಾಮಿ, ಟಾಸ್ಕ್ ಫೋರ್ಸ್ ಸಂಚಾಲಕ ಶುಭೋದಯ ಆಳ್ವ, ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲಿಯಾನ್, ಟಿ. ಕೆ. ಸುಧೀರ್, ನೀರಜ್ ಚಂದ್ರ ಪಾಲ್, ಆರಿಫ್ ಬಾವಾ, ಡಿ. ಎಂ. ಮುಸ್ತಫಾ, ರಮಾನಂದ ಪೂಜಾರಿ, ಉದಯ ಕುಂದರ್, ಆಸೀಫ್ ಜೆಪ್ಪು, ಕೃತಿನ್ ಕುಮಾರ್, ಯಶ್ವವಂತ ಪ್ರಭು, ಸವಾನ್ ಜೆಪ್ಪು, ಯೋಗೇಶ್ ನಾಯಕ್, ಶಾನ್ ಡಿಸೋಜಾ, ಲಕ್ಷ್ಮಣ್ ಶೆಟ್ಟಿ, ಸಿದ್ದೀಕ್, ಅಲ್ತಾಫ್, ಝಹೀರ್, ಹಮೀದ್ ಮತ್ತಿತ್ತರರು ಉಪಸ್ಥಿತರಿದ್ದರು.
Comments are closed.