
ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ವತಿಯಿಂದ ಕೊರೊನಾ ನಿಯಂತ್ರಣ ಕಾಯ೯ ನಿಮಿತ್ತ ಪಾಲಿಕೆಯ ಆರೋಗ್ಯ ವಿಭಾಗದ ಅಧೀನದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಕೋರೊನಾ ನಿಯಂತ್ರಣಕ್ಕಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಇದಕ್ಕಾಗಿ ಎ.ಬಿ. ಶೆಟ್ಟಿ ಮೆಮೊರಿಯಲ್ ಡೆಂಟಲ್ ಕಾಲೇಜಿನ ವಿದ್ಯಾಥಿ೯ಗಳು ಅವರು ಸ್ಥಾಪಿಸಿದ “ಲಕ್ಷ್ಯ” ಎಂಬ ಸಂಘಟನೆಯ ಮುಖಾಂತರ ಎ.ಬಿ.ಶೆಟ್ಟಿ ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾಥಿ೯ಗಳಿಂದ ಧನಸಹಾಯವನ್ನು ಪಡೆದು ಮಹಾನಗರಪಾಲಿಕೆಯ ಈ ಕೋರೊನಾ ನಿಯಂತ್ರಣ ಕಾಯ೯ಕ್ಕೆ ಕೈಜೋಡಿಸಿ ಬೆಂಬಲವನ್ನು ಸೂಚಿಸಿದರು.
ಈ ಕುರಿತು ಪಾಲಿಕೆಗೆ ಅಗತ್ಯ ಬೀಳುವ ಕೆಲವು ಪಲ್ಸ್ ಓಕ್ಸಿ ಮೀಟರ್, ಗ್ಲೂಕೋ ಮೀಟರ್ ಮತ್ತು ತಮ೯ಲ್ ಸ್ಕ್ಯಾನರ್ ಗಳನ್ನು ಮೇಯರ್ ಪ್ರೇಮಾನಂದ ಶೆಟ್ಟಿಯವರಿಗೆ ಹಸ್ತಾಂತರಿಸಿದರು.
ಮಂಗಳೂರು ಮಹಾನಗರಪಾಲಿಕೆಯ ಮುಖ್ಯ ಸಚೇತಕರಾದ ಸುಧೀರ್ ಶೆಟ್ಟಿ ಮತ್ತು ಆರೋಗ್ಯಾಧಿಕಾರಿ ಡಾ| ಮಂಜಯ್ಯ ಶೆಟ್ಟಿ ಹಾಗೂ ಎ.ಬಿ.ಶೆಟ್ಟಿ ಮೆಮೊರಿಯಲ್ ಡೆಂಟಲ್ ಕಾಲೇಜಿನ ಪ್ರಾಧ್ಯಾಪಕರಾದ ಡಾ| ಪ್ರೀತೇಶ್ ಶೆಟ್ಟಿ, ವಿದ್ಯಾಥಿ೯ಗಳಾದ ಸುದೀಪ್ ನಾರಾಯಣ ಬಿ., ಜೇಕೋಬ್ ಜಾಜ್೯ರವರು ಉಪಸ್ಥಿತರಿದ್ದರು
Comments are closed.