ಕರಾವಳಿ

ರೈತ ಸಂಪರ್ಕ ಕೇಂದ್ರದಲ್ಲಿ ಭತ್ತ ಬಿತ್ತನೆ ಬೀಜ ವಿತರಣೆ : ಆಸಕ್ತ ರೈತರು ಕೂಡಲೇ ಸಂಪರ್ಕಿಸಿ

Pinterest LinkedIn Tumblr

ಮಂಗಳೂರು, ಮೇ.20 : ಪ್ರಸ್ತುತ ಸಾಲಿನ ಮುಂಗಾರು ಹಂಗಾಮಿಗೆ ಭತ್ತದ ಬಿತ್ತನೆಗಾಗಿ MO4 ತಳಿಯ ಬೀಜವನ್ನು ರೈತ ಸಂಪರ್ಕ ಕೇಂದ್ರದಲ್ಲಿ ದಾಸ್ತಾನಿಕರಿಸಲಾಗಿದೆ. ಲಾಕ್‍ಡೌನ್ ಅವಧಿಯಲ್ಲಿ ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ರೈತಭಾಂದವರು ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬಿತ್ತನೆ ಬೀಜ ಹಾಗೂ ಇತರೆ ಪರಿಕರಗಳಿಗೆ ಬೇಡಿಕೆಯನ್ನು ಸಲ್ಲಿಸಬಹುದಾಗಿದೆ.

ರೈತ ಸಂಪರ್ಕ ಕೇಂದ್ರದ ಹೆಸರು ಹಾಗೂ ದಾಸ್ತಾನು ವಿವರ:

ಮಂಗಳೂರು-ಬಿ ಹೋಬಳಿ ದಾಸ್ತಾನು 25 ಕ್ವಿಂಟಾಲ್, ದೂ. ಸಂಖ್ಯೆ: 0824-2423609,

ಸುರತ್ಕಲ್ ಹೋಬಳಿ ದಾಸ್ತಾನು 25 ಕ್ವಿಂಟಾಲ್, ದೂ. ಸಂಖ್ಯೆ: 0824-2477914,

ಮುಲ್ಕಿ ಹೋಬಳಿ ದಾಸ್ತಾನು 50ಕ್ವಿಂಟಾಲ್, ದೂ. ಸಂಖ್ಯೆ: 0824-2290837,

ಗುರುಪುರ ಹೋಬಳಿ ದಾಸ್ತಾನು 25 ಕ್ವಿಂಟಾಲ್ ದೂ. ಸಂಖ್ಯೆ: 9448252523,

ಮೂಡಬಿದ್ರೆ ಹೋಬಳಿ ದಾಸ್ತಾನು 25 ಕ್ವಿಂಟಾಲ್ ದೂ. ಸಂಖ್ಯೆ: 9448252523.

ಆಸಕ್ತ ರೈತರು ಆರ್.ಟಿ.ಸಿ ಪ್ರತಿ, ಆಧಾರ್ ಸಂಖ್ಯೆ ಹಾಗೂ ಬ್ಯಾಂಕಿನ ಪಾಸ್ ಪುಸ್ತಕದ ವಿವರದೊಂದಿಗೆ ಫ್ರೂಟ್ಸ್ ಪೋರ್ಟಲ್‍ನಲ್ಲಿ ನೋಂದಾಯಿಸಿಕೊಂಡು ಬಿತ್ತನೆ ಬೀಜವನ್ನು ಪಡೆಯಬಹುದಾಗಿದೆ ಎಂದು ಮಂಗಳೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Comments are closed.