ಕರಾವಳಿ

ಎಸ್‌ಸಿಡಿಸಿಸಿ ಬ್ಯಾಂಕ್ ವತಿಯಿಂದ ಸೇವಾಂಜಲಿ ಟ್ರಸ್ಟ್‌ಗೆ ಆಯಂಬುಲೆನ್ಸ್‌ ಕೊಡುಗೆ : ಸೋಂಕಿತರಿಗೆ ಉಚಿತ ಸೇವೆ ಎಂದ ಶಾಸಕರು

Pinterest LinkedIn Tumblr

ಮಂಗಳೂರು : ಕೋವಿಡ್‌ನ ಸಂದಿಗ್ಧ ಪರಿಸ್ಥಿತಿಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ನಮ್ಮ ಮನವಿ ಮೇರೆಗೆ ಬ್ಯಾಂಕ್ ವತಿಯಿಂದ ಆಯಂಬುಲೆನ್ಸ್ ಕೊಡುಗೆಯಾಗಿ ನೀಡಿದ್ದಾರೆ. ಪೊಲೀಸರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್, ಆಶಾ ಕಾರ್ಯಕರ್ತರಿಗೆ ತಲಾ ಏಳು ಸಾವಿರ ರೂ. ನೆರವು ನೀಡಿರುವುದು ಶ್ಲಾಘನೀಯ. ಈ ಆಯಂಬುಲೆನ್ಸ್ ಮೂಲಕ ಜಿಲ್ಲೆಯ ಯಾವೂದೇ ಕೋವಿಡ್‌ ಸೋಂಕಿತರನ್ನು ಉಚಿತವಾಗಿ ಸಾಗಿಸಲಾಗುವುದು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಅವರು ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಸಾರ್ವಜನಿಕರ ಉಚಿತ ಸೇವೆಗಾಗಿ ಆಕ್ಸಿಜನ್ ಸಹಿತ ಆಯಂಬುಲೆನ್ಸ್‌ನ್ನು ಸೇವಾಂಜಲಿ ಟ್ರಸ್ಟ್‌ಗೆ ಹಸ್ತಾಂತರಿಸಿದ ಸಂದರ್ಭ ಸ್ವೀಕರಿಸಿ ಮಾತನಾಡಿದರು.

ಸೇವಾಂಜಲಿ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಶಾಸಕ ವೇದವ್ಯಾಸ ಕಾಮತ್‌ ಅವರಿಗೆ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಆಯಂಬುಲೆಬನ್ಸ್ ಕೀಯನ್ನು ಹಸ್ತಾಂತರಿಸಿದರು.

ಕೋವಿಡ್‌ನ ಸಂದಿಗ್ಧ ಪರಿಸ್ಥಿತಿಯಲ್ಲಿ ಕಳೆದ ವರ್ಷ ಕೂಡ ಬಹಳಷ್ಟು ಸೇವೆ ನೀಡಿದ್ದ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರು ಈ ಬಾರಿ ಸ್ವಂತ ಖರ್ಚಿನಿಂದ ಕುದ್ರೋಳಿಯ ಉಳ್ಳಾಲ ನರ್ಸಿಂಗ್ ಹೋಮನ್ನು ಕೋವಿಡ್ ಕೇರ್ ಸೆಂಟರ್ ಮಾಡಲು ಜಿಲ್ಲಾಡಳಿತದ ಜತೆ ಮಾತುಕತೆ ನಡೆಸಿರುವುದು ಜಿಲ್ಲೆಗೆ ಹೆಮ್ಮೆಯ ವಿಚಾರ ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕರು ಜನಪರವಾಗಿ ಕೆಲಸ ಮಾಡುವಾಗ ಅವರ ಮನವಿಗೆ ಸ್ಪಂದಿಸಿ ಆಯಂಬುಲೆನ್ಸ್ ನೀಡಿದ್ದೇವೆ. ಸಿಎಂ ನಿಧಿಗೆ ಐದು ಕೋಟಿ ರೂ. ನೆರವು ಹಾಗೂ ಆರೋಗ್ಯ ಇಲಾಖೆಗೆ ಐದು ಲಕ್ಷ ಮಾಸ್ಕ್ ಕೊಡಲಿದ್ದೇವೆ ಎಂದು
ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಹೇಳಿದರು.

ಕಾರ್ಯಕ್ರಮದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ದೇವಿಪ್ರಸಾದ್ ಶೆಟ್ಟಿ ಬೆಳಪು, ರಾಜಾರಾಮ ಭಟ್ ಟಿ.ಜಿ., ಶಶಿಕುಮಾರ್ ರೈ ಬಾಲ್ಯೋಟ್ಟು, ವಾದಿರಾಜ ಶೆಟ್ಟಿ, ಸದಾಶಿವ ಉಳ್ಳಾಲ್, ಹರಿಶ್ಚಂದ್ರ, ಸಿಇಒ ರವೀಂದ್ರ ಬಿ., ಮಹಾಪ್ರಬಂಧಕ ಗೋಪಿನಾಥ್ ಭಟ್, ಸಹಕಾರಿ ಸಂಘಗಳ ಉಪನಿಬಂಧಕ ಪ್ರವೀಣ್ ಬಿ.ನಾಯಕ್, ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಪ್ರವೀಣ್, ಉದ್ಯಮಿ ಜಯಪ್ರಕಾಶ್ ತುಂಬೆ, ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್‌ನ ಪ್ರಮುಖರಾದ ಹನುಮಂತ ಕಾಮತ್, ನರೇಶ್ ಶೆಣೈ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Comments are closed.