ಕರಾವಳಿ

ಕೋಸ್ಟ್ ಗಾರ್ಡ್ ಕ್ರಾಪ್ಟರ್ ಮೂಲಕ ಕಾರ್ಯಾಚರಣೆ: ಸಮುದ್ರದ ಮಧ್ಯೆ ಸಿಲುಕಿದ್ದ ವೆಸೆಲ್ ಟಗ್‌ನಲ್ಲಿದ್ದ 9 ಮಂದಿಯ ರಕ್ಷಣೆ

Pinterest LinkedIn Tumblr

ಮಂಗಳೂರು, ಮೇ 17: ಕಾಪು ಲೈಟ್ ಹೌಸ್ ನಿಂದ ಸುಮಾರು ಐದು ನಾಟಿಕಲ್ ದೂರದಲ್ಲಿ ಸಮುದ್ರದ ಮಧ್ಯೆ ಬಂಡೆಗಳ ನಡುವೆ ಸಿಲುಕಿಕೊಂಡಿರುವ ಕೋರಮಂಡಲ ಕೋರಮಂಡಲ ಎಕ್ಸ್ ಪ್ರೆಸ್ ಪ್ರೆಸ್ ವೆಸೆಲ್ ಟಗ್ ನಲ್ಲಿರುವ ಜನರ ರಕ್ಷಣೆಗೆ ಹೆಲಿಕಾಪ್ಟರ್ ಹಾಗೂ ಶಿಪ್ ಮೂಲಕ ಕಾರ್ಯಾಚರಣೆ ನಡೆಸಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳೀನ್ ಕುಮಾರ್ ಕಟೀಲ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಯವರೊಂದಿಗೆ ಕೋಸ್ಟಲ್ ಗಾರ್ಡ್ ಡಿ. ಐ.ಜಿ ಶ್ರೀ ಎಸ್.ಬಿ. ವೆಂಕಟೇಶ್ ಅವರನ್ನು ಭೇಟಿ ಮಾಡಿ ಸಮುದ್ರದ ಪ್ರಕ್ಷುಬ್ಧತೆಯಿಂದ ಕಾಪು ಲೈಟ್ ಹೌಸ್ ನಿಂದ ಸುಮಾರು ಐದು ನಾಟಿಕಲ್ ದೂರದಲ್ಲಿ ಸಮುದ್ರದ ಮಧ್ಯೆ ಬಂಡೆಗಳ ನಡುವೆ ಸಿಲುಕಿಕೊಂಡಿರುವ ಮಂಗಳೂರಿನ MRPL ಕಂಪನಿಗೆ ಆಗಮಿಸುವ Cruid Oil ಅಂಡರ್ ಗ್ರೌಂಡ್ ಪೈಪ್ ಕನೆಕ್ಟ್ ಮಾಡುವ ಗುತ್ತಿಗೆ ಪಡೆದಿರುವ K E I – RSOR ಕಂಪನಿಯ ಕೋರಮಂಡಲ ಸಪೋರ್ಟರ್-9 ಎಂಬ ಹೆಸರಿನ Vessel ನಲ್ಲಿರುವ ಜನರ ರಕ್ಷಣೆಯ ಕುರಿತು ಚರ್ಚಿಸಿದರು.

ಇಂದು ಮುಂಜಾನೆಯಿಂದ ನೌಕಾ ಸೇನೆಯ ಹೆಲಿಕಾಪ್ಟರ್ ಹಾಗೂ ಶಿಪ್ ಮೂಲಕ ಕಾರ್ಯಾಚರಣೆ ನಡೆಯುತ್ತಿದ್ದು, ಎಲ್ಲಾ 9 ಜನರನ್ನು ರಕ್ಷಿಸಲಾಗಿದೆ. ಎಂದು ಕೋಸ್ಟಲ್ ಗಾರ್ಡ್ ಡಿ. ಐ.ಜಿ ಶ್ರೀ ಎಸ್.ಬಿ. ವೆಂಕಟೇಶ್ ಅವರು ಮಾಹಿತಿ ನೀಡಿದ್ದಾರೆ.

Comments are closed.