ಕರಾವಳಿ

ಸಂಸದೆ ಶೋಭಾ ಕರಂದ್ಲಾಜೆ ಸಕಾಲಿಕ ಸ್ಪಂದನದಿಂದ 9 ಮಂದಿ ಪ್ರಾಣಾಪಾಯದಿಂದ ಪಾರು

Pinterest LinkedIn Tumblr

ಉಡುಪಿ: ತೌಖ್ತೇ ಚಂಡಮಾರುತದಿಂದ ಉಂಟಾಗಿರುವ ಸಮುದ್ರದ ಪ್ರಕ್ಷುಬ್ಧತೆಯಿಂದ ಕಾಪು ಲೈಟ್ ಹೌಸ್ ನಿಂದ ಸುಮಾರು ಐದು ನಾಟಿಕಲ್ ದೂರದಲ್ಲಿ ಸಮುದ್ರದ ಮಧ್ಯೆ ಬಂಡೆಗಳ ನಡುವೆ ಸಿಲುಕಿಕೊಂಡಿದ್ದ ಮಂಗಳೂರಿನ ಎಂ.ಆರ‌್.ಪಿ.ಎಲ್. ಕಂಪನಿಗೆ ಆಗಮಿಸಬೇಕಾಗಿದ್ದ ಕಚ್ಚಾ ತೈಲವನ್ನು ಭೂಗತ ಪೈಪ್ ಗೆ ಸೇರಿಸುವ ಗುತ್ತಿಗೆ ಪಡೆದಿರುವ K E I – RSOR ಕಂಪನಿಯ ಕೋರಮಂಡಲ ಸಪೋರ್ಟರ್-9 ಎಂಬ ಹೆಸರಿನ Vessel ನಲ್ಲಿರುವ ಒಂಭತ್ತು ಜನರ ರಕ್ಷಣೆ ಗಾಗಿ ನಿನ್ನೆ ಸಂಜೆಯಿಂದಲೇ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಘ್, ಕೋಸ್ಟ್ ಗಾರ್ಡ್ ಮುಖ್ಯಸ್ಥ ಅಮೋಲ್ ಶುಕ್ಲಾ ಮೊದಲಾದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಪರಿಣಾಮವಾಗಿ ಸೋಮವಾರ ಮುಂಜಾನೆಯಿಂದ ಕೊಚ್ಚಿಯಿಂದಾಗಮಿಸಿದ ನೌಕಾ ಸೇನೆಯ ಹೆಲಿಕಾಪ್ಟರ್ ಹಾಗೂ ಶಿಪ್ ಮೂಲಕ ಕಾರ್ಯಾಚರಣೆ ನಡೆದು ಎಲ್ಲಾ 9 ಜನರನ್ನು ರಕ್ಷಿಸಲಾಗಿದೆ.

ಸಂಸದೆಯವರು ಕೋಸ್ಟಲ್ ಗಾರ್ಡ್ ಡಿ.ಐ.ಜಿ ಎಸ್.ಬಿ. ವೆಂಕಟೇಶ್ ಅವರಿಂದ ಪ್ರತೀ ಕ್ಷಣದ ಮಾಹಿತಿ ಪಡೆಯುತ್ತಾ ಒಂಭತ್ತು ಮಂದಿಯ ರಕ್ಷಣಾ ಕಾರ್ಯದ ಉಸ್ತುವಾರಿ ನಡೆಸಿದರು.

Comments are closed.