ಕರಾವಳಿ

ಉಚಿತ ಅಹಾರ ಒದಗಿಸುವ ಇಂದಿರಾ ಕ್ಯಾಂಟಿನ್‌ಗಳಿಗೆ ಮೇಯರ್ ಭೇಟಿ : ವ್ಯವಸ್ಥೆ ಹಾಗೂ ಶುಚಿತ್ವವ ಪರಿಶೀಲನೆ

Pinterest LinkedIn Tumblr

ಮಂಗಳೂರು : ಸರಕಾರವು ಕೋವಿಡ್ 19 ವೈರಾಣುವಿನ ಹರಡುವಿಕೆಯನ್ನು ತಡೆಗಟ್ಟಲು ಹಾಗೂ ಪ್ರಸರಣ ಸರಪಳಿಯನ್ನು ತುಂಡರಿಸಲು ರಾಜ್ಯಾದ್ಯಂತ ಮೇ 24 ರವೆರೆಗೆ ಲಾಕ್ ಡೌನ್ ಅನ್ನು ಜ್ಯಾರಿಗೊಳಿಸಿ ಆದೇಶಿಸಿರುತ್ತದೆ.

ಈ ಸಂದಭ೯ದಲ್ಲಿ ಕೂಲಿ ಕಾಮಿ೯ಕರು, ವಲಸಿಗರು ಹಾಗೂ ಇತರೆ ದುಬ೯ಲ ವಗ೯ದವರಿಗೆ ಅನಾನುಕೂಲವಾಗದಂತೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚಾಲ್ತಿಯಲ್ಲಿರುವ ಇಂದಿರಾ ಕ್ಯಾಂಟಿನ್ ಗಳಲ್ಲಿ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟಗಳನ್ನು ಉಚಿತವಾಗಿ ಒದಗಿಸಲು ನಿದೇ೯ಶಿಸಲಾಗಿರುತ್ತದೆ.

ಅದರಂತೆ ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಇಂದಿರಾ ಕ್ಯಾಂಟಿನಲ್ಲಿ ನಗರ ವ್ಯಾಪ್ತಿಯಲ್ಲಿರುವ ಕೂಲಿ ಕಾಮಿ೯ಕರಿಗೆ, ವಲಸಿಗರಿಗೆ ಮತ್ತು ದುಬ೯ಲ ವಗ೯ದವರಿಗೆ ಉಪಹಾರ ಮತ್ತು ಊಟದ ವ್ಯವಸ್ಥೆಯನ್ನು ಮಾಡಿ ಉಚಿತವಾಗಿ ನೀಡಲು ಪ್ರಾರಂಭಿಸಲಾಗಿದೆ.

ಸದ್ರಿ ವ್ಯವಸ್ಥೆಯನ್ನು ಹಾಗೂ ಅಲ್ಲಿಯ ಶುಚಿತ್ವವನ್ನು ಪರಿಶೀಲಿಸಲು ಮೇಯರ್ ಪ್ರೇಮಾನಂದ ಶೆಟ್ಟಿಯವರು ನಗರದ ವಿವಿಧೆಡೆಯಲ್ಲಿರುವ ಇರುವ ಇಂದಿರಾ ಕ್ಯಾಂಟಿನ್ ಗೆ ಭೇಟಿ ನೀಡಿದರು.

ಮಹಾನಗರಪಾಲಿಕೆಯ ಉಪ ಆಯುಕ್ತರು ಆಡಳಿತ ಸಂತೋಷ್ ಕುಮಾರ್ ಮತ್ತು ಹಿರಿಯ ನೈಮ೯ಲ್ಯ ನಿರೀಕ್ಷಕರು ಮೇಯರ್ ರವರ ಜೊತೆಗಿದ್ದರು.

Comments are closed.