
ಮಂಗಳೂರು :ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿರುವ ಜೆಪ್ಪು, ಪಡೀಲ್ ಮತ್ತು ಎಕ್ಕೂರು ಲಸಿಕಾ ಕೇಂದ್ರಕ್ಕೆ ಮೇಯರ್ ಪ್ರೇಮಾನಂದ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದರು.
ಕೆಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆಯಲು ಬರುವ ಸಾವ೯ಜನಿಕರಿಗೆ ಅಂತರ ಕಾಯ್ದುಕೊಳ್ಳಲು ಸ್ಥಳವಕಾಶದ ಕೊರತೆ ಇರುವುದರಿಂದ ಲಸಿಕಾ ಕೇಂದ್ರವನ್ನು ಸ್ಥಳೀಯ ಶಾಲಾ ಮತ್ತು ಕಾಲೇಜು ಕಟ್ಟಡಕ್ಕೆ ಸ್ಥಳಾಂತರಿಸಿ ಲಸಿಕೆ ಕಾಯ೯ಕ್ರಮ ಮುಂದುವರಿಸಿರುವುದನ್ನು ಪರಿಶೀಲಿಸಿದರು.
ನಗರದಲ್ಲಿ ಪ್ರಸ್ತುತ ಜೋರಾಗಿ ಮಳೆ ಸುರಿಯುವುದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಕಾದ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸುವಂತೆ ಸಂಬಂಧಿತ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಒಂದು ವೇಳೆ ಲಸಿಕಾ ಕೇಂದ್ರಗಳಲ್ಲಿ ಸಾವ೯ಜನಿಕರಿಗೆ ಅಂತರ ಕಾಯ್ದುಕೊಂಡು ನಿಲ್ಲಲು ಸ್ಥಳವಕಾಶದ ಕೊರತೆ ಇದ್ದಲ್ಲಿ ಹೊರಗಡೆ ಮೇಲ್ಛಾವಣಿಯನ್ನು ಅಳವಡಿಸಿ ಸೂಕ್ತ ಸ್ಥಳವಕಾಶ ಕಲ್ಪಿಸುವಂತೆ ಮೇಯರ್ ರವರು ಸೂಚನೆ ನೀಡಿದರು.
ಈ ರೀತಿ ಲಸಿಕೆ ಪಡೆಯಲು ಬಂದ ಸಾವ೯ಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲು ತಿಳಿಸಿದರು. ಪಾಲಿಕೆಯ ಆಯುಕ್ತರಾದ ಅಕ್ಷಯ್ ಶ್ರೀಧರ್, ಸಂತೋಷ್ ಕುಮಾರ್ ಉಪ ಆಯುಕ್ತರು ಆಡಳಿತ, ಸದಸ್ಯರಾದ ಶೈಲೇಶ್ ಶೆಟ್ಟಿ, ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.