ಕರಾವಳಿ

ಅಗತ್ಯ ಮಂಜಾಗೃತಾ ಕ್ರಮಗಳ ಮೂಲಕ ಸೋಂಕು ಹತೋಟಿಗೆ ತರಲು ಸಾಧ್ಯ : ಸಚಿವ ಕೋಟ

Pinterest LinkedIn Tumblr

ಮಂಗಳೂರು, ಮೇ 11 :ಜಿಲ್ಲೆಯ ನಗರ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಕೋವಿಡ್-19 ಪ್ರಕರಣಗಳು ಕಂಡು ಬರುತ್ತಿವೆ. ಇವುಗಳನ್ನು ಪರಿಣಾಮಕಾರಿಯಾಗಿತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಮಂಜಾಗೃತಾ ಕ್ರಮಗಳನ್ನು ತೆಗೆದುಕೊಂಡಾಗ ಮಾತ್ರಜಿಲ್ಲೆಯಲ್ಲಿ ಸೋಂಕು ಹತೋಟಿಗೆ ತರಲು ಸಾಧ್ಯವಾಗುತ್ತದೆ ಎಂದು ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣಇಲಾಖೆಯ ಸಚಿವ ಹಾಗೂ ಮಂಗಳೂರು ಉಸ್ತವಾರಿ ಸಚಿವಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದರು.

ಅವರು ಮಂಗಳೂರು ಮಹಾನಗರ ಪಾಲಿಕೆಯ ಮಂಗಳ ಸಭಾಂಗಣದಲ್ಲಿ, ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿಕೋವಿಡ್ ಸೋಂಕು ಹರಡುವಿಕೆಯ ನಿಯಂತ್ರಣದ ಬಗ್ಗೆ ಮಹಾನಗರ ಪಾಲಿಕೆ ಸದಸ್ಯರೊಂದಿಗೆ ನಡೆದ ಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ನಗರ ಪ್ರದೇಶ ವ್ಯಾಪ್ತಿಯಲ್ಲಿಕೊರೋನಾ -19 ಸೋಂಕು ಉಲ್ಬಣಗೊಳ್ಳುತ್ತಿವೆ. ಪ್ರತಿದಿನ ಕೊರೋನಾ ಸೋಂಕು ದೃಢಪಡುತ್ತಿರುವುದರಲ್ಲಿ ಶೇ.75 ರಿಂದ 80 ರಷ್ಟು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ವಾಸಿಸುವರೇ ಆಗಿರುತ್ತಾರೆ.

ವಾರ್ಡ್‍ನಟಾಸ್ಕ್‍ಪೋರ್ಸ್ ಸಮಿತಿಗಳು ಸಕ್ರಿಯವಾಗಿಕಾರ್ಯನಿರ್ವಹಿಸುವುದರೊಂದಿಗೆ ಸೋಂಕು ಹರಡುವುದನ್ನುತಡೆಗಟ್ಟಬೇಕುಎಂದು ಸೂಚನೆ ನೀಡಿದರು.

ಕಾರ್ಪೋರೇಟರ್‍ಗನ್ನೊಳಗೊಂಡು ರಚನೆಯಾಗಿರುವ ವಾರ್ಡ್ ವಾರು ಟಾಸ್ಕ್‍ಪೋರ್ಸ್ ಸಮಿತಿಗಳು ಪ್ರತಿ ದಿನ ಬೆಳಗ್ಗೆ 10 ಗಂಟೆಗೆ ಸಭೆಯನ್ನು ಸೇರುವುರೊಂದಿಗೆ ಸ್ಥಳೀಯವಾಗಿ ಕೊರೋನಾದೃಢಪಟ್ಟ ಹೋಮ್‍ಐಸೋಲೇಷನ್‍ನಲ್ಲಿರುವ ರೋಗಿಗಳ ಬಗ್ಗೆ ಆರೋಗ್ಯ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದು, ಅವರುಗಳ ಆರೋಗ್ಯಕ್ಷೇಮ ವಿಚಾರಿಸಿ, ಅಗತ್ಯ ನೆರವನ್ನು ನೀಡಬೇಕು. ಅವರಿಗೆಚಿಕಿತ್ಸೆಯಅವಶ್ಯಕತೆಕಂಡು ಬಂದಲ್ಲಿ ಅವರುಗಳನ್ನು ಕೋವಿಡ್‍ಕೇರ್ ಸೆಂಟರ್‍ಗಳಿಗೆ ವರ್ಗಾಯಿಸಿ ಚಿಕಿತ್ಸೆ ನೀಡುವ ಕೆಲಸವಾಗಬೇಕು ಎಂದರು.

ಕೋರೋನಾ ಪೀಡಿತರ ಪ್ರಾಥಮಿಕ ಸಂಪರ್ಕ ಹೊಂದಿದವರನ್ನುತಪ್ಪದೇ ಪರೀಕ್ಷೆಗೆ ಒಳಪಡಿಸಬೇಕು.ಅಲ್ಲದೇಅವರ ಫಲಿತಾಂಶ ಬರುವವರೆಗೂ ಹೋಂ ಕ್ವಾರಂಟೈನ್‍ನಲ್ಲಿಇರವಂತೆ ನೋಡಿಕೊಳ್ಳಬೇಕು ಎಂದರು.

ಸಾರ್ವಜನಿಕರು ಮನೆಯಿಂದ ಹೊರಗೆ ಬಂದಾಗಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕಅಂತರ ಕಾಯ್ದುಕೊಳ್ಳಬೇಕು.ಆಗಾಗ ಕೈಗಳನ್ನು ಶುಚಿ ಮಾಡಿಕೊಳ್ಳಬೇಕು.ಅನಗತ್ಯವಾಗಿಓಡಾಡಬಾರದು ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸುರಕ್ಷತರಾಗಿರಿಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ. ಕೆ. ವಿ. ಮಾತನಾಡಿ, ಯಾವುದೇ ವ್ಯಕ್ತಿಗಳಿಗೆ ನೆಗಡಿ, ಕೆಮ್ಮು, ಜ್ವರ ಸೇರಿದಂತೆಕೋವಿಡ್ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣದಲ್ಲಿಯೇ ಕೊರೋನಾ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಫಲಿತಾಂಶ ಬರುವವರೆಗೂಅಂತರ ಕಾಪಾಡಿಕೊಳ್ಳುವುದು ಒಳ್ಳೆಯದು ಎಂದರು.

ವಾರ್ಡ್‍ಗಳಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಸಾಧಯವಾದಲ್ಲಿ ಸ್ವಯಂಸೇವಕರು ಗಳನ್ನು ಹಾಗೂ ಅಪಾರ್ಟ್‍ಮೆಂಟ್‍ಗಳ ಅಸೋಸಿಯೇಷನ್‍ನ ಪದಾಧಿಕಾರಿಗಳ ಸಹಕಾರ ಪಡೆಯ ಬೇಕು ಎಂದರು.

ಸಭೆಯಲ್ಲಿ ಶಾಸಕ ವೇದವ್ಯಾಸಕಾಮತ್, ಶಾಸಕ ಭರತ್ ಶೆಟ್ಟಿ, ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಆಯುಕ್ತಅಕ್ಷಯ್ ಶ್ರೀಧರ್, ಉಪಮೇಯರ್ ಸುಮಂಗಳಾ ರಾವ್, ಡಿಸಿಪಿ ಹರಿರಾಂ ಶಂಕರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Comments are closed.