ಕರಾವಳಿ

ದ.ಕ.ಜಿಲ್ಲೆ : ಇಂದಿನಿಂದ ಮೊದಲ ಡೋಸ್ ಕೋವಿಶಿಲ್ಡ್ ಲಸಿಕೆ ಪ್ರಾರಂಭ

Pinterest LinkedIn Tumblr

ಮಂಗಳೂರು, ಮೇ 11 : ಮೇ11 ರಿಂದ 18 ವರ್ಷದಿಂದ 44 ವರ್ಷದೊಳಗಿನ ಫಲಾನುಭವಿಗಳಿಗೆ ಮೊದಲ ಡೋಸ್ ಕೋವಿಶಿಲ್ಡ್ ಲಸಿಕೆಯನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮತ್ತು ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕು ಆಸ್ಪತ್ರೆಗಳಲ್ಲಿ ನೀಡಲಾಗುವುದು. ಈಗಾಗಲೇ ಈ ವಯೋಮಾನದವರು ಕಡ್ಡಾಯವಾಗಿ Registration ಮೂಲಕ Appointment Schedule ಮಾಡಿದವರಿಗೆ ಮಾತ್ರ ಲಸಿಕೆ ನೀಡಲಾಗುವುದು. On Spot Registration or Vaccination ಇರುವುದಿಲ್ಲ.

( ನಾಲ್ಕು ದಿನಗಳ ಹಿಂದಿನ ಕಡತ ಚಿತ್ರ)

ಪ್ರತಿದಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ 250 ರಂತೆ, ಪ್ರತಿ ತಾಲೂಕು ಆಸ್ಪತ್ರೆಯಲ್ಲಿ 170 ರಂತೆ 7 ದಿನಗಳ ಕಾಲ ಲಸಿಕಾ ಶಿಬಿರವನ್ನು ಆಯೋಜಿಸಲಾಗಿದೆ. 18 ವರ್ಷ ಮೇಲ್ಪಟ್ಟವರು Appointment Schedule ನಂತರ ಬರುವ SMS ಸಂದೇಶವನ್ನು(4 Digit) ಖಚಿತಪಡಿಸಿದ ನಂತರವೇ ಲಸಿಕಾ ಶಿಬಿರಕ್ಕೆ ಹೋಗಬೇಕಾಗಿದೆ.

ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 45 ವರ್ಷ ಮೇಲ್ಪಟ್ಟ ಫಲಾನುಭವಿಗಳು ಕೋವಿಶಿಲ್ಡ್ 2ನೇ ಡೋಸ್ ಲಸಿಕೆಯನ್ನು ಮಾತ್ರ ಪಡೆಯಬಹುದಾಗಿದೆ.

ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 100 ಡೋಸ್ ಲಸಿಕೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 200 ಡೋಸ್ ಲಸಿಕೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 200 ಡೋಸ್ ಲಸಿಕೆಯನ್ನು ಲಸಿಕೆಯ ಲಭ್ಯತೆಗೆ ಅನುಗುಣವಾಗಿ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.