ಕರಾವಳಿ

ಕೋವಿಡ್ ಲಸಿಕೆ : ಆನ್ ಲೈನ್ ಮೂಲಕ ನೊಂದಾಯಿಸಿಕೊಳ್ಳಲು ಪತ್ರಕರ್ತರಿಗೆ ಸೂಚನೆ

Pinterest LinkedIn Tumblr

ಮಂಗಳೂರು : ಹಿರಿಯ ಪತ್ರಕರ್ತರಲ್ಲಿ ಬಹುತೇಕ ಮಂದಿ ಈಗಾಗಲೇ ಪತ್ರಕರ್ತರಿಗೆ ಆಯೋಜಿಸಲಾದ ಮೊದಲ ಸುತ್ತಿನ ವ್ಯಾಕ್ಸಿನೇಷನ್ ಶಿಬಿರದಲ್ಲಿ ಭಾಗವಹಿಸಿ, ಲಸಿಕೆ ಪಡೆದುಕೊಂಡಿದ್ದಾರೆ. ಪ್ರಸ್ತುತ ತುಂಬಾ ಮಂದಿ ಪತ್ರಕರ್ತರಿಂದ ಮತ್ತೊಂದು ಸುತ್ತಿನ ‘ಲಸಿಕಾ ಶಿಬಿರ’ ಆಯೋಜನೆಗೆ ಬೇಡಿಕೆ ಬರುತ್ತಿದೆ.

ಈ ಬಗ್ಗೆ ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ. ರಾಜೇಂದ್ರ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ.

ಪ್ರಸ್ತುತ ವ್ಯಾಕ್ಸಿನೇಷನ್ ಪಡೆಯುವವರ ಸಂಖ್ಯೆ ಹೆಚ್ಚಿದ್ದು, ಜಿಲ್ಲಾಸ್ಪತ್ರೆ, ಆರೋಗ್ಯ ಕೇಂದ್ರಗಳಲ್ಲಿ ಹೊರತುಪಡಿಸಿ ಹೊರಗಡೆ ಶಿಬಿರ ಆಯೋಜಿಸುವುದು ಕಷ್ಟ ಮತ್ತು ಲಸಿಕೆ ಕೊರತೆಯೂ ಇದೆ.

ಈ ಹಿನ್ನಲೆಯಲ್ಲಿ ಮೇ 10ರ ಬಳಿಕ ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲೆಗೆ ಲಸಿಕೆ ಬರುವ ಸಾಧ್ಯತೆಯಿದ್ದು, ಆಗ ಎರಡನೇ ಹಂತದ ಲಸಿಕಾ ಶಿಬಿರ ಆಯೋಜಿಸುವ ಬಗ್ಗೆ ಅಧಿಕಾರಿಗಳಿಂದ ಭರವಸೆ ಸಿಕ್ಕಿದೆ.

 ಆನ್‌ಲೈನ್ ನೋಂದಾಯಿಸಿ :

ಎರಡನೇ ಹಂತದ ಲಸಿಕಾ ಶಿಬಿರಕ್ಕೆ ಪ್ರತಿಯೊಬ್ಬ ಪತ್ರಕರ್ತರು ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ (ಹಿರಿಯ ನಾಗರಿಕರ) ದಾಖಲೆಗಳನ್ನು ಆನ್‌ಲೈನ್ ಮೂಲಕ ನೋಂದಾಯಿಸಿಕೊಳ್ಳಿ. ಆನ್‌ಲೈನ್ ನೋಂದಾವಣೆ ಆಗದಿದ್ದಲ್ಲಿ ಲಸಿಕೆ ಹಾಕಿಸಿಕೊಳ್ಳುವುದು ಕಷ್ಟ ಸಾಧ್ಯ.

ಜಿಲ್ಲಾಡಳಿತ ಪತ್ರಕರ್ತರಿಗೆ ಎರಡನೇ ಶಿಬಿರಕ್ಕೆ ದಿನಾಂಕ ಘೋಷಣೆ ಮಾಡಿದ ಕೂಡಲೇ ಎಲ್ಲರಿಗೂ ಈ ಬಗ್ಗೆ ಮಾಹಿತಿ ರವಾನಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.