ಕರಾವಳಿ

ರಾತ್ರಿ ಕರ್ಫ್ಯೂ, ವಾರಂತ್ಯದ ಕರ್ಫ್ಯೂ : ಬಸ್ ಸೇವೆಗಳು, ರೈಲುಗಳು ಮತ್ತು ವಿಮಾನ ಸಂಚಾರಕ್ಕೆ ಅನುಮತಿ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು, ಎಪ್ರಿಲ್ 23 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 (ಕೋರೊನಾ ವೈರಾಣು ಕಾಯಿಲೆ – 2019) ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿರ್ದೇಶನದಂತೆ ಜಿಲ್ಲಾಡಳಿತವು ಎಲ್ಲಾ ಅವಶ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ಕೋವಿಡ್ -19 ಸೋಂಕು ಹರಡುವಿಕೆ ಉಲ್ಬಣವಾಗಿದ್ದು, ನಿಯಂತ್ರಣ ಕಾರ್ಯ ಅತ್ಯವಶ್ಯಕವಾಗಿರುವುದರಿಂದ ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯಾದ್ಯಂತ ಎಪ್ರಿಲ್ 21 ರಿಂದ ರಾತ್ರಿ 9 ಗಂಟೆಯಿಂದ ಮೇ. 04 ರಂದು ಬೆಳಿಗ್ಗೆ 6 ಗಂಟೆಯವರೆಗೆ ರಾತ್ರಿ ಕರ್ಫ್ಯೂ, ವಾರಂತ್ಯದಕರ್ಫ್ಯೂ ಹಾಗೂ ಪ್ರತಿದಿನದ ಮಾರ್ಗಸೂಚಿಗಳನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಡಾ. ರಾಜೇಂದ್ರ ಕೆ.ವಿ ಆದೇಶಿಸಿದ್ದಾರೆ.

ಸದ್ರಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ.

ವಾರಂತ್ಯದ ಕರ್ಫ್ಯೂವನ್ನೂ ಒಳಗೊಂಡಂತೆ ಎಪ್ರಿಲ್ 21 ರಂದು ರಾತ್ರಿ 9 ಗಂಟೆಯಿಂದ ಮೇ. 04 ರಂದು ಬೆಳಿಗ್ಗೆ 6 ಗಂಟೆಯವರೆಗೆ ರೆಸ್ಟೋರೆಂಟ್ ಗಳಿಂದ ತಿನಿಸುಗಳನ್ನು ಮನೆಗೆ ತೆಗೆದುಕೊಂಡು ಹೋಗಲು (ಪಾರ್ಸೆಲ್) ಮತ್ತು ಹೋಮ್ ಡೆಲಿವರಿ ಸೇವಾ ಪೂರೈಕೆದಾರರಿಗೆ ಸೇವೆ ನೀಡಲು ಮಾತ್ರ ಅನುಮತಿಯಿರುತ್ತದೆ.

ವಾರಾಂತ್ಯ ಕರ್ಫ್ಯೂ ದಿನಗಳಲ್ಲಿ ದೂರ ಪ್ರಯಾಣದ ರಾತ್ರಿ ಬಸ್ ಸೇವೆಗಳು, ರೈಲುಗಳು ಮತ್ತು ವಿಮಾನ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಪ್ರಯಾಣಿಸುವವರು ಸಾರ್ವಜನಿಕ ಸಾರಿಗೆ, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳ (including cabs by aggregators) ಮೂಲಕ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳು ಮತ್ತು ಬಸ್ ಟರ್ಮಿನಲ್‍ಗಳು, ನಿಲ್ದಾಣಗಳು, ಸ್ಟ್ಯಾಂಡ್‍ಗಳಿಗೆ ಪ್ರಯಾಣದ ಅಗತ್ಯ ದಾಖಲೆಯೊಂದಿಗೆ ಕೋವಿಡ್ -19 ಸಮುಚಿತ ವರ್ತನೆಯನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಸಂಚರಿಸಲು ಅನುಮತಿಸಲಾಗಿದೆ.

ವಾರಾಂತ್ಯ ಕರ್ಫ್ಯೂ ದಿನಗಳಲ್ಲಿ ಸಾರ್ವಜನಿಕ ಸಾರಿಗೆಗಳ ಸಂಚಾರಕ್ಕೆ ನಿರ್ಬಂಧವಿರುವುದಿಲ್ಲ, ಆದರೆ ಮೇಲೆ ತಿಳಿಸಿದ ಉದ್ದೇಶಗಳಿಗೆ, ತುರ್ತು ಮತ್ತು ಅಗತ್ಯ ಸೇವೆಗಳು ಹಾಗೂ ಕರ್ತವ್ಯನಿಮಿತ್ತ ಸಂಚರಿಸಲು ಮಾತ್ರವೇ ಅವಕಾಶವಿರುತ್ತದೆ. ಸಾರ್ವಜನಿಕರು, ವಾರಂತ್ಯದ ಕರ್ಫ್ಯೂ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಲು ತಿಳಿಸಲಾಗಿದೆ.

ಸಾರ್ವಜನಿಕರು, COVID-19 ಸಮುಚಿತ ವರ್ತನೆಯನ್ನು ಅಂದರೆ ಮುಖಗವಸುಗಳನ್ನು ಧರಿಸುವುದು, ಕೈಗಳ ನೈರ್ಮಲ್ಯ ಮತ್ತು ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಸಾರ್ವಜನಿಕರು ಜಿಲ್ಲಾಡಳಿತದಿಂದ ನೀಡಲಾಗುವ ನಿರ್ದೇಶನಗಳನ್ನು ಪಾಲಿಸಿ ಕೋವಿಡ್ -19 ನಿಯಂತ್ರಣ ಕಾರ್ಯದಲ್ಲಿ ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.