ಕರಾವಳಿ

ತಂಬಾಕು ಉತ್ಪನ್ನ ನಿಷೇಧ : ಕಾಯಿದೆ ಉಲ್ಲಂಘನೆ ಮಾಡಿದವರ ವಿರುದ್ಧ ಕಾರ್ಯಾಚರಣೆ

Pinterest LinkedIn Tumblr

ಮಂಗಳೂರು, ಎಪ್ರಿಲ್ 23: ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಹಾಗೂ ಪಾನ್ ಮಸಾಲ ಉತ್ಪನ್ನಗಳನ್ನು ಜಗಿದು ಉಗಿಯುವುದರಿಂದ ಕೋವಿಡ್ 19 ಹಾಗೂ ಇತರೆ ಸಾಂಕ್ರಾಮಿಕ ರೋಗಗಳು ಇತರರಿಗೆ ಹರಡುವ ಸಂಭವ ಹೆಚ್ಚಾಗಿರುವುದರಿಂದ ಜಿಲ್ಲಾ ಮತ್ತು ತಾಲೂಕು ತನಿಖಾದಳದ ಸದಸ್ಯರ ತಂಡವು ದಿನಾಂಕ ಎಪ್ರಿಲ್ 21 ರಂದು ತಾಲೂಕು ಪಟ್ಟಣ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿತು.

ಸಾರ್ವಜನಿಕ ಸ್ಥಳಗಳಲ್ಲಿ ಜಗಿಯುವ ತಂಬಾಕು ಉತ್ಪನ್ನಗಳ ಸೇವನೆ ಹಾಗೂ COTPA-2003 ಕಾಯಿದೆ ಉಲ್ಲಂಘಿಸುವವರ ಮೇಲೆ ಕಾರ್ಯಚರಣೆ ನಡೆಸಿ ಸೆಕ್ಷನ್ 4, 6ಎ ಹಾಗೂ 6ಬಿ ಅಡಿಯಲ್ಲಿ 33 ಪ್ರಕರಣ ದಾಖಲಿಸಿ ಸುಮಾರು ರೂ. 5,300 ದಂಡ ವಿಧಿಸಲಾಯಿತು. ಹಾಗೂ ಕಾಯಿದೆ ಕುರಿತಂತೆ ಅಂಗಡಿ ಹಾಗೂ ಹೋಟೇಲ್/ಬಾರ್ ಮಾಲೀಕರಿಗೆ ಮಾಹಿತಿ ನೀಡಲಾಯಿತು.

ತಂಡದಲ್ಲಿ ಉರ್ವಾ ಪೊಲೀಸ್ ಠಾಣೆಯ ಪೂಜಾ ಸಿ ಹಿರೇಮಠ , ಆಹಾರ ಮತ್ತು ಸುರಕ್ಷ ಅಧಿಕಾರಿ ಹೆಚ್.ಪಿ. ರಾಜು, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರು ಡಾ. ಹನುಮಂತ ರಾಯಪ್ಪ, ಆಪ್ತ ಸಮಾಲೋಚಕ ವಿಜಯ್ ಕುಮಾರ್ ಮತ್ತು ಕಚೇರಿ ಸಿಬ್ಬಂದಿ ವಿದ್ಯಾಕುಮಾರಿ ಭಾಗವಹಿಸಿದರು.

Comments are closed.