ಕರಾವಳಿ

ಅಪರೂಪ ವಿದ್ಯಮಾನ : ಪಿಲಿಕುಳದಲ್ಲಿ ಮಂಗಳ ಗ್ರಹದ ಆಚ್ಚಾದನೆ ವೀಕ್ಷಣೆ

Pinterest LinkedIn Tumblr

ಮಂಗಳೂರು : ಖಗೋಳದ ಅಪರೂಪ ವಿದ್ಯಮಾನವಾದ ಚಂದ್ರನಿಂದ ಮಂಗಳ ಗ್ರಹದ ಆಚ್ಚಾದನೆಯನ್ನು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ದೂರದರ್ಶಕಗಳ ಮೂಲಕ ವೀಕ್ಷಿಸಲಾಯಿತು.

ಈ ವಿದ್ಯಮಾನದ ಆರಂಭವನ್ನು ಸಾಯಂಕಾಲದ ಸೂರ್ಯನ ಬೆಳಕಿನ ಪ್ರಖರತೆಯಿಂದ ನೋಡಲಾಗದಿದ್ದರೂ ಕೊನೆಯಲ್ಲಿ ರಾತ್ರಿ ಸುಮಾರು 7.28ರ ವೇಳೆಗೆ ಮಂಗಳ ಗ್ರಹ ಚಂದ್ರನ ಹಿಂದೆ ಪುನಃ ಗೋಚರವಾದಾಗ ಸ್ಪಷ್ಟವಾಗಿ ದೂರದರ್ಶಕದಲ್ಲಿ ಕಂಡುಬಂದಿತು.

ಇಲ್ಲಿ ಸೆರೆಹಿಡಿಯಲಾದ ಛಾಯಾಚಿತ್ರಗಳನ್ನು ದೇಶದ ಇತರ ತಾರಾಲಯಗಳು ಹಾಗೂ ಹವ್ಯಾಸಿ ಖಗೋಳಶಾಸ್ತ್ರಜ್ಞರು ನಡೆಸಿದ ಸಂವಹನ ಕಾರ್ಯಕ್ರಮದ ನೇರ ಪ್ರಸಾರದಲ್ಲಿ ಪ್ರದರ್ಶಿಸಲಾಯಿತು ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.