ಉಡುಪಿ: ಬ್ರಹ್ಮಾವರದ ಹಾರಾಡಿ ಗ್ರಾಮದ ಗಾಂಧಿನಗರ ಹೊಳೆ ಬದಿಯಲ್ಲಿರುವ ಮೀನು ಕಟ್ಟಿಂಗ್ ಶೆಡ್ ನಲ್ಲಿ ಕಳ್ಳತನ ನಡೆದಿದೆ. ಜನರೇಟರ್ ಕಟ್ಟಿಂಗ್ ಟೇಬಲ್ ಸೇರಿದಂತೆ 1,31,250 ರೂ ಮೌಲ್ಯದ ಸೊತ್ತು ಕಳವಾಗಿದೆ.

ಈ ಹಿಂದೆ ಮೀನು ಕಟ್ಟಿಂಗ್ ಶೆಡ್ ನಲ್ಲಿ ಸುಮಾರು 150 ಜನ ಮಹಿಳೆಯರು ಬಂದು ಕೆಲಸ ಮಾಡುತ್ತಿದ್ದು, ಕಳೆದ ಎರಡು ತಿಂಗಳಿಂದ ಸರಿಯಾಗಿ ಮೀನು ಸಿಗದ ಕಾರಣ ಕಾರ್ಮಿಕರಿಗೆ ಕೆಲಸ ಇಲ್ಲದ ಹಿನ್ನಲೆಯಲ್ಲಿ ಇತ್ತೀಚೆಗೆ ಶೆಡ್ ಅನ್ನು ತಾತ್ಕಲಿಕವಾಗಿ ಮುಚ್ಚಲಾಗಿತ್ತು. ಫ್ಯಾಕ್ಟರಿಯಲ್ಲಿ ಅಡುಗೆ ಕೆಲಸ ಮಾಡಿಕೊಂಡಿರುವ ಮೈಮುನಾ ಬಿ ಎಂಬವರು ಅಲ್ಲಿಯೇ ಸಮೀಪ ವಾಸವಾಗಿದ್ದು, ಅವರು ಎರಡು ದಿನಗಳಿಗೊಮ್ಮೆ ಶೆಡ್ ಬಂದು ಪರಿಶೀಲನೆ ನಡೆಸುತ್ತಿದ್ದು ಈ ವೇಳೆ ಕಳ್ಳತನ ಬೆಳಕಿಗೆ ಬಂದಿದೆ.
ಬ್ರಹ್ಮಾವರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Comments are closed.