ಕರಾವಳಿ

ಲಯನ್ಸ್ ಜಿಲ್ಲೆ317-ಡಿ ಗವರ್ನರ್ ಆಗಿ ವಸಂತ ಕುಮಾರ ಶೆಟ್ಟಿ ಆಯ್ಕೆ

Pinterest LinkedIn Tumblr

ಮಂಗಳೂರು : ದ.ಕ., ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳನ್ನು ಒಳಗೊಂಡ ಲಯನ್ ಜಿಲ್ಲೆ 317-ಡಿ ಇದರ ನೂತನ ಗವರ್ನರ್ ಆಗಿ ಬಂಟ್ವಾಳದ ವಸಂತಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಬಿ.ಸಿ.ರೋಡ್‌ನ ಬಂಟರ ಭವನದಲ್ಲಿ ಇತ್ತೀಚೆಗೆ ಜರಗಿದ ಲಯನ್ಸ್ ಜಿಲ್ಲಾ ಸಮ್ಮೇಳನದಲ್ಲಿ ಚುನಾವಣೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಿತು.

ಪ್ರಥಮ ಉಪ ಗರ್ವನ್‌ರ್ ಆಗಿ ಸಕಲೇಶಪುರದ ಸಂಜೀತ್ ಶೆಟ್ಟಿ ಹಾಗೂ ದ್ವಿತೀಯ ಉಪ ಗರ್ವನ್‌ರ್ ಆಗಿ ಕಿನ್ನಿಗೋಳಿಯ ಮೆಲ್ವಿನ್ ಡಿಸೋಜಾ ಆಯ್ಕೆಯಾದರು.

ನಿಯೋಜಿತ ಜಿಲ್ಲಾ ಗವರ್ನರ್ ಅವರ ಮೈಕ್ರೊ ಸಂಪುಟದ ಕಾರ್ಯದರ್ಶಿಯಾಗಿ ಶಶಿಧರ್ ಮಾರ್ಲ ಮಂಗಳೂರು, ಖಜಾಂಜಿಯಾಗಿ ಶ್ರೀನಿವಾಸ ಪೂಜಾರಿ ಬಂಟ್ವಾಳ, ಸಂಪುಟ ಸಂಯೋಜಕರಾಗಿ ದಾಮೋದರ ಬಿ.ಎಂ.ಬಂಟ್ವಾಳ, ಗವರ್ನರ್ ಸಂಯೋಜಕರಾಗಿ ಮೊ ದೀನ್ ಕುಂಞ ಸುರತ್ಕಲ್, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಜಯರಾಂ ದೇರಪ್ಪಜ್ಜನಮನೆ ಸುಳ್ಯ ಹಾಗೂ ಜಿಲ್ಲಾ ಲಿಯೋ ಅಧ್ಯಕ್ಷರಾಗಿ ಕವನ್ ಕುಬೆವೂರು ನೇಮಕಗೊಂಡಿದ್ದಾರೆ.

ನೂತನ ಜಿಲ್ಲಾ ಸಂಪುಟದ ಪದಗ್ರಹಣ ಸಮಾರಂಭ ಜುಲೈ 10ರಂದು ಬಂಟ್ವಾಳದ ಬಂಟರ ಭವನದಲ್ಲಿ ನಡೆಯಲಿದೆ.

ನೂತನ ಗವರ್ನರ್ ಅವರ ಮುಂದಿನ ಅಧಿಕಾರಾವಧಿಯಲ್ಲಿ ವಿಶೇಷ ಚೈತನ್ಯ ಮಕ್ಕಳ ಶ್ರೇಯೋಭಿವೃದ್ಧಿ, ಆರೋಗ್ಯವರ್ಧಕ ಯೋಗ ಕಾರ್ಯಕ್ರಮ, ಮಾನವ ಅಂಗಾಂಗ ದಾನ, ಗಾಮೀಣಾಭಿವೃದ್ಧಿ ಯೋಜನೆ ಮತ್ತು ಶಿಕ್ಷಣಕ್ಕೆ ಆದ್ಯತೆ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದೆಂದು ನಿಯೋಜಿತ ಗರ್ವನರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.