ಕರಾವಳಿ

ಸೋಮೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ಉತ್ಸವ ರದ್ದುಗೊಳಿಸುವಂತೆ ಆದೇಶ

Pinterest LinkedIn Tumblr

ಮಂಗಳೂರು, ಎಪ್ರಿಲ್ 20 : ಜಿಲ್ಲೆಯ ಸೋಮೇಶ್ವರದ ಶ್ರೀ ಸೋಮನಾಥ ದೇವಳದ ಬ್ರಹ್ಮಕಲಶೋತ್ಸವ ಹಾಗೂ ವರ್ಷಾವಧಿ ಉತ್ಸವವು ಎಪ್ರಿಲ್ 18 ರಿಂದ ಮೇ 1 ರವರೆಗೆ ನಡೆಯಲಿದ್ದು, ತಾಲೂಕು ದಂಡಾಧಿಕಾರಿಯವರ ಆದೇಶ ಸಂಖ್ಯೆ: ಎಂ.ಎ.ಜಿ./ಸಿ.ಆರ್/01/2021-22 ಎಪ್ರಿಲ್ 17 ರಂತೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.

ಸಾರ್ವಜನಿಕರು ಇದಕ್ಕೆ ಸಹಕರಿಸಬೇಕೆಂದು ಶ್ರೀ ಸೋಮನಾಥ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.