ಕರಾವಳಿ

ಸಂಘಟನೆಯಿಂದ ಗ್ರಾಮಾಭಿವೃದ್ಧಿ : ವಿಶ್ವ ಭಾರತೀ ಫ್ರೆಂಡ್ಸ್ ಸರ್ಕಲ್ ವಾರ್ಷಿಕೋತ್ಸವದಲ್ಲಿ ಎಸ್.ಪಿ.ಕಲ್ಕೂರ

Pinterest LinkedIn Tumblr

ಮಂಗಳೂರು : ವಿಶ್ವ ಭಾರತೀ ಫ್ರೆಂಡ್ಸ್ ಸರ್ಕಲ್ (ರಿ) ಕೋಡಿಕಲ್ ಆಲಗುಡ್ಲ ಇದರ 33ನೇ ವಾರ್ಷಿಕೋತ್ಸವವು ಮಾ. 13 ರಂದು ಸಂಜೆ ಕೋಡಿಕಲ್ಲಿನ ನಾಗಬ್ರಹ್ಮ ಚಾವಡಿಯ ಎದುರುಗಡೆ ಎ.ಜೆ ಶೆಟ್ಟಿ ಗ್ರೌಂಡ್ ನಲ್ಲಿ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾದ ರಾಜೇಶ್ ಸಾಲ್ಯಾನ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಸಭಾ ಕಾರ್ಯಕ್ರಮದಲ್ಲಿ ವೀರ ಯೋಧರಿಗೆ ಮತ್ತು ಸಮಾಜ ಸೇವಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ನಡೆಯಿತು.

ಕುಲಶೇಖರ ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ನ ಅಧ್ಯಕ್ಷರೂ ಹಾಗೂ ಶ್ರೇಯಾ ಕನ್ಸಲ್ಟೆಂಟ್ ನ ಮಾಲೀಕರಾದ ಬೊಕ್ಕಪಟ್ನ ಪ್ರೇಮಾನಂದ ಕುಲಾಲ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತರು.

ಗೌರವ ಅತಿಥಿಯಾಗಿ ಪಾಲ್ಗೊಂಡಿದ್ದ ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡುತ್ತ ಭಜನಾ ಯುವ ಜನಾಂಗ ಸನ್ಮಾರ್ಗದಲ್ಲಿ ನಡೆಯಲು ಸಂಘಟನೆಗಳಲ್ಲಿ ಸೇರಿಕೊಳ್ಳಬೇಕು ಸಂಘಟನೆಗಳಿಂದ ಗ್ರಾಮದ ಅಭಿವೃದ್ಧಿ ಆಗಲು ಸಾಧ್ಯ ಎಂದು ನುಡಿದರು.

ವೇದಿಕೆಯಲ್ಲಿ ಮುಖ್ಯಅತಿಥಿಗಳಾಗಿ ಯೋಗೇಶ್ ರೈ ಕೋಡಿಕಲ್, ಸ್ಥಳೀಯ ಕಾರ್ಪೋರೇಟರುಗಳಾದ ಕಿರಣ್ ಕುಮಾರ್, ಮನೋಜ್ ಕುಮಾರ್ ಪಂಜಿಮೊಗರು, 24ನೇ ವಾರ್ಡ್ ನ ಕಾರ್ಪೋರೇಟರ್ ಶಶಿಧರ ಹೆಗ್ದೆ , ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಹಾಗೂ ಸ್ಥಳೀಯ ಉದ್ಯಮಿ ವೃಂದಾವನ ಕನ್ ಸ್ಟ್ರಕ್ಶನ್ ಇದರ ಮಾಲೀಕರಾದ ಚಂದ್ರಹಾಸ ಪೂಜಾರಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಮಾಜ ಸೇವೆಗಾಗಿ ಬಿ ಪ್ರೇಮಾನಂದ ಕುಲಾಲ್. ಮಾಜಿ ಯೋಧ ಗೋಪಾಲ್ ವಿ. ಸನ್ಮಾನಿಸಿದರು . ಪ್ರತಿಭಾವಂತ ವಿದ್ಯಾರ್ಥಿ ಸ್ವಾತಿಕ್ ಪೂಜಾರಿ ಅವರನ್ನು ಗೌರವಾರ್ಪಣೆ ಮಾಡಲಾಯಿತು.

ಕೊಡಿಯಾಲ್ ಬೈಲ್ ನಿರ್ದೇಶಿಸಿದ ಶಿವದೂತ ಗುಳಿಗೆ ನಾಟಕ ಪ್ರದಶನ ನಡೆಯಿತು. ಕಾರ್ಯಕ್ರಮವನ್ನು ರಾಕೇಶ್ ಶೆಟ್ಟಿ ನಿರೂಪಿಸಿದ್ದು, ಮಾಜಿ ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ವರದಿಯನ್ನು ಮಂಡಿಸಿದರು. ಸಮಾರಂಭದಲ್ಲಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Comments are closed.