ಕರಾವಳಿ

ವಿಕೋಪ ತುರ್ತು ಸ್ಪಂದನಾ ತಂಡಕ್ಕೆ ರಾಜ್ಯಮಟ್ಟದ ಮೂರು ದಿನಗಳ ತರಬೇತಿಗೆ ಚಾಲನೆ : ವಿಪತ್ತು ತುರ್ತು ನಿರ್ವಹಣೆ ಪ್ರಸಕ್ತ ಪರಿಸ್ಥಿತಿಯ ಅಗತ್ಯತೆ : ಡಾ. ಎಂ. ಎಸ್. ಭಟ್

Pinterest LinkedIn Tumblr

ಮಂಗಳೂರು :ಪ್ರಕೃತಿ ಮತ್ತು ಮಾನವ ನಿರ್ಮಿತ ವಿಕೋಪಗಳಿಗೆ ತುರ್ತು ಸ್ಪಂದಿಸುವ ವ್ಯವಸ್ಥೆ ಪ್ರಸ್ತಕ ಸಂದರ್ಭ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯು ರಾಜ್ಯ ಮಟ್ಟದಲ್ಲಿ ವಿಕೋಪ ಸ್ಪಂದನಾ ತಂಡಕ್ಕೆ ಸೂಕ್ತ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದು ಎನ್.ಐ.ಟಿ.ಕೆ ಡೀನ್ ಡಾ. ಎಂ. ಎನ್. ಭಟ್ ಹೇಳಿದರು.

ಭಾರತೀಯ ರೆಡ್‍ಕ್ರಾಸ್ ಸೊಸೈಟಿ ಕರ್ನಾಟಕ ಶಾಖೆಯ ಶತಮಾನೋತ್ವವ ಆಚರಣೆ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆಯು ಸುರತ್ಕಲ್‍ನ ಎನ್. ಐ. ಟಿ. ಕೆ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ವಿಪತ್ತು ಸ್ಪಂದನಾ ತಂಡದ ಮೂರು ದಿನಗಳ ತರಬೇತಿ ಕಾರ್ಯಕ್ರಮಕ್ಕೆ ಶುಕ್ರವಾರ ತೆಂಗಿನ ಹಿಂಗಾರ ಅರಳಿಸುವ ಮೂಲಕ ಹಾಗೂ ತೆಂಬರೆ ಬಾರಿಸುವ ಮೂಲಕ ಸಾಂಪ್ರದಾಯಿಕವಾಗಿ ಚಾಲನೆ ನೀಡಲಾಯಿತು.

ಭಾರತೀಯ ರೆಡ್‍ಕ್ರಾಸ್ ಸೊಸೈಟಿ ಕರ್ನಾಟಕ ಶಾಖೆಯ ಶತಮಾನೋತ್ವವ ಆಚರಣೆ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆಯು ಸುರತ್ಕಲ್‍ನ ಎನ್. ಐ. ಟಿ. ಕೆ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ವಿಪತ್ತು ಸ್ಪಂದನಾ ತಂಡದ ಮೂರು ದಿನಗಳ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮತನಾಡಿದರು.

ನಾನಾ ರೀತಿಯ ವಿಪತ್ತುಗಳು ನಡೆದಾಗ ತಕ್ಷಣ ಅದಕ್ಕೆ ಸ್ಪಂದಿಸುವುದಕ್ಕೆ ಸೂಕ್ತ ರೀತಿಯ ತರಬೇತಿಯ ಅಗತ್ಯ ಇದೆ. ಇಡೀ ರಾಜ್ಯದ ವಿವಿಧ ಜಿಲ್ಲೆಗಳ ಪ್ರತಿನಿಧಿಗಳಿಗೆ ಮಂಗಳೂರಿನಲ್ಲಿ ತರಬೇತಿ ನೀಡುತ್ತಿರುವುದು ಉಪಯುಕ್ತವಾದ ಕೆಲಸ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆಯ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ, ರಾಜ್ಯದಲ್ಲಿ ಶತಮಾನದ ಆಚರಣೆಯಲ್ಲಿರುವ ರೆಡ್‍ಕ್ರಾಸ್ ಸಂಸ್ಥೆ ನಾನಾ ಜನಪರ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆಯು ಸುಮಾರು ನಾಲ್ಕು ಕೋಟಿ ರೂ.ಗಳ ಸ್ವಂತ ರೆಡ್‍ಕ್ರಾಸ್ ಭವನ ಕಟ್ಟಡದ ನಿರ್ಮಾಣಕ್ಕೆ ಮುಂದಾಗಿದೆ. ಕಟ್ಟಡದಲ್ಲಿ ವಿಪತ್ತು ನಿರ್ವಹಣೆಗಾಗಿಯೇ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದರು.

ರೆಡ್‍ಕ್ರಾಸ್ ರಾಜ್ಯ ಘಟಕದ ಉಪಾಧ್ಯಕ್ಷ ಡಾ. ವಿ,ಎಲ್.ಎಸ್ ಕುಮಾರ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ಎ ಶಕೀಬ್, ಯತೀಶ್ ಬೈಕಂಪಾಡಿ, ಎನ್.ಐ.ಟಿ. ಕೆ. ಸಂಸ್ಥೆಯ ಪ್ರೊ. ರಾಜ್ ಮೋಹನ್ ಉಪಸ್ಥಿತರಿದ್ದರು. ಜಿಲ್ಲಾ ರೆಡ್‍ಕ್ರಾಸ್ ಘಟಕದ ಗೌರವ ಕಾರ್ಯದರ್ಶಿ ಪ್ರಭಾಕರ ಶರ್ಮಾ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಸಚೇತ್ ಸುವರ್ಣ ನಿರೂಪಿಸಿದರು.

Comments are closed.