ಕರಾವಳಿ

ಉಡುಪಿ ಡಿಸಿಐಬಿ ಪೊಲೀಸರ ಕಾರ್ಯಾಚರಣೆ; ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಬಂಧನ

Pinterest LinkedIn Tumblr

ಉಡುಪಿ: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.

(ಸಾಂದರ್ಭಿಕ ಚಿತ್ರ)

ಮೂಲತ: ಮಂಡ್ಯ ಪಾಂಡವಪುರದ ಹಾಲಿ ಉಡುಪಿ ಝೆನ್ ಗಾರ್ಡನ್ ನಿವಾಸಿ ಕೆ.ಎಸ್ ಗೌತಮ್ ಗೌಡ (23), ಬೆಳಗಾವಿ‌ ಮೂಲದ ಪ್ರಸ್ತುತ ಮಣಿಪಾಲ ನಿವಾಸಿ ವಿಕ್ಕಿ ದಯಾಳ್ @ ವಿಕ್ಕಿ (21) ಬಂಧಿತ ಆರೋಪಿಗಳು.

ಉಡುಪಿಯ ಕುಂಜಿಬೆಟ್ಟು ಕೆಇಬಿ ವಸತಿ ಗೃಹದ ಬಳಿ ಇಬ್ಬರು ವ್ಯಕ್ತಿಗಳು ಗಾಂಜಾ ಮಾರಾಟ ಮಾಡಲು ಬಂದಿರುವ ಬಗ್ಗೆ ಉಡುಪಿ ಡಿಸಿಐಬಿ ಇನ್ಸ್‌ಪೆಕ್ಟರ್ ಮಂಜಪ್ಪ ಡಿ.ಆರ್ ಅವರಿಗೆ ಬಂದ ಖಚಿತ ಮಾಹಿತಿಯಂತೆ‌ ಆ ಸ್ಥಳಕ್ಕೆ ದಾಳಿ ನಡೆಸಿದ ಅವರು ಆರೋಪಿಗಳಿಬ್ಬರನ್ನು ವಶಕ್ಕೆ ಪಡೆದು ಅವರ ವಶದಲ್ಲಿ ಕೆಂಪು ಬಣ್ಣದ ಪ್ಲಾಸ್ಟಿಕ್‌ ಕವರಿನಲ್ಲಿದ್ದ 30 ಸಾವಿರ ಮೌಲ್ಯದ 1050 ಗ್ರಾಂ ತೂಕದ ಗಾಂಜಾ ಹಾಗೂ ರೂಪಾಯಿ 20 ಸಾವಿರ ಮೌಲ್ಯದ ಹಾಗೂ 25 ಸಾವಿರ ಮೌಲ್ಯದ ಮತ್ತೊಂದು ಮೊಬೈಲ್ ಫೋನ್‌ನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

Comments are closed.